ಶುಕ್ರವಾರ, ನವೆಂಬರ್ 15, 2019
21 °C
ವಿರೋಧ ಪಕ್ಷದ ನಾಯಕ

ಯಡಿಯೂರಪ್ಪ ಅವರನ್ನು ಖುಷಿಪಡಿಸಲು ತಂತ್ರ: ಸಚಿವ ಸೋಮಣ್ಣಗೆ ಸಿದ್ದರಾಮಯ್ಯ ತಿರುಗೇಟು

Published:
Updated:
Prajavani

ಶಿರಸಿ: ‘ವಸತಿ ಸಚಿವ ವಿ.ಸೋಮಣ್ಣ ಅವರು ತಾವು ಮಾಡಿರುವ ಅಕ್ರಮಗಳ ಬಗ್ಗೆ ನೋಡಿಕೊಳ್ಳಲಿ. ನಮ್ಮ ಅವಧಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಖುಷಿಪಡಿಸಲು, ಸೋಮಣ್ಣ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಅಕ್ರಮಗಳ ತನಿಖೆ ಮಾಡುವುದಾಗಿ ಸೋಮಣ್ಣ ಹೇಳಿದ್ದಾರೆ. ಆದರೆ, ಆ ಸಂದರ್ಭದಲ್ಲಿ ಅವರೇ ವಸತಿ ಸಚಿವರಾಗಿದ್ದರು. ಈಗಲೂ ಅವರೇ ವಸತಿ ಸಚಿವರು’ ಎಂದು ಟೀಕಿಸಿದರು.

‘ಸಿದ್ದರಾಮಯ್ಯ ಅಂದರೆ ಸುಳ್ಳು’ ಎಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸುಳ್ಳು ಎಂದರೆ ಬಿಜೆಪಿ, ಬಿಜೆಪಿಯಿಂದಲೇ ಸುಳ್ಳು ಹುಟ್ಟಿರುವುದು’ ಎಂದರು. ಅನರ್ಹ ಶಾಸಕರ ಬಗ್ಗೆ ಮುಖ್ಯಮಂತ್ರಿ ಆಡಿರುವ ಮಾತಿನ ಧ್ವನಿಮುದ್ರಣವನ್ನು ಸುಪ್ರೀಂ ಕೋರ್ಟ್‌ ಸಲ್ಲಿಸಲಾಗಿದೆ. ಕೋರ್ಟ್ ತೀರ್ಪು ಏನು ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಜನಕ್ಕೆ ದ್ರೋಹ ಮಾಡಿರುವ ಅನರ್ಹ ಶಾಸಕರನ್ನು ಮತದಾರರು ಸೋಲಿಸಬೇಕು ಎಂದು ಹೇಳಿದರು.

ಪ್ರತಿಕ್ರಿಯಿಸಿ (+)