ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸಮತ ಬೇಡ, ಅದು ಸಂವಿಧಾನಬದ್ಧ ಅಲ್ಲ: ಸಿದ್ದರಾಮಯ್ಯ

Last Updated 18 ಜುಲೈ 2019, 8:57 IST
ಅಕ್ಷರ ಗಾತ್ರ

ಬೆಂಗಳೂರು:ವಿಪ್ ಅನ್ವಯವಾಗುತ್ತದೆಯೋ ಇಲ್ಲವೋ ಎಂಬುದು ಇತ್ಯರ್ಥವಾಗುವರೆಗೆ ವಿಶ್ವಾಸಮತದ ನಿರ್ಣಯದ ಮೇಲಿನ ಚರ್ಚೆ ಹಾಗೂ ಮತಕ್ಕೆ ಹಾಕುವುದು ಬೇಡ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು. ಈ ಸಂಬಂಧ ರೂಲಿಂಗ್ ಕೊಡುವಂತೆಸಿದ್ದರಾಮಯ್ಯ ಸಭಾಧ್ಯಕ್ಷರನ್ನು ಕೋರಿದರು.

ಸಂವಿಧಾನದ 10ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವಂತೆ ವಿಷಯದಲ್ಲಿ ಸಿದ್ದರಾಮಯ್ಯ ಕ್ರಿಯಾಲೋಪ ಎತ್ತಿದ್ದಾರೆ. ಅದು ಇಲ್ಲಿಗೆ ಸೂಕ್ತ ಎಂಬ ಕಾರಣಕ್ಕೆ ಅವಕಾಶ ನೀಡಲಾಗಿದೆ ಎಂದು ಸಭಾಧ್ಯಕ್ಷರು ಸಮರ್ಥಿಸಿಕೊಂಡರು. ಮಾಧುಸ್ವಾಮಿ ಮತ್ತೆ ಆಕ್ಷೇಪ ಎತ್ತಿದಾಗ, ಬೇಗ ಇದರ ಬಗ್ಗೆ ಹೇಳಿ ಮುಗಿಸುವಂತೆ ಸಿದ್ದರಾಮಯ್ಯ ಅವರಿಗೆ ಸ್ಪೀಕರ್ ಸೂಚಿಸಿದರು.

ಸಿದ್ಧರಾಮಯ್ಯ ಅವರ ಬೆಳಗ್ಗಿನ ಭಾಷಣ..

ಮುಖ್ಯಮಂತ್ರಿ ಭಾಷಣದ ಮೇಲೆ ಮಧ್ಯಪ್ರವೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು ಪಕ್ಷಾಂತರದ ಬಗ್ಗೆ ಮಾತನಾಡಿ ಸದನದ ಗಮನ ಸೆಳೆದರು.

1967ರಲ್ಲಿ ಗಯಾಲಾಲ್‌ ಎಂಬುವವರು ಒಂದೇ ದಿನದಲ್ಲಿ ಮೂರು ಬಾರಿ ಪಕ್ಷಾಂತರ ಮಾಡಿದ್ದರು, ಕಾಂಗ್ರೆಸ್‌ನಿಂದ, ಸಂಯುಕ್ತ ರಂಗ, ಅಲ್ಲಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡುತ್ತಾರೆ. ಆಗ ಪಕ್ಷಾಂತರ ಬಗ್ಗೆ ದೇಶ ಗಂಭೀರವಾಗಿ ಚರ್ಚೆ ನಡೆಸಿತು. ಪಕ್ಷಾಂತರ ಎಂಬುದು ಭಾರತದ ಪ್ರಜಾಪ್ರಭುತ್ವವನ್ನೇ ಅಲುಗಾಡಿಸುತ್ತದೆ. ಈಪಕ್ಷಾಂತರ ಎಂಬ ರೋಗ ನಿವಾರಿಸಿದಾಗಲೇ ಮಹಾತ್ಮಾ ಗಾಂಧಿ ಅವರಿಗೆ ಗೌರವ ಸೂಚಿಸಿದಂತೆ ಎಂದು ಸಿದ್ದರಾಮಯ್ಯ ಹೇಳಿದರು.

ಶಾಸಕಾಂಗ ಪಕ್ಷದ ನಾಯಕನಿಗೆ ವಿಪ್‌ ನೀಡಲು ಅವಕಾಶವಿಲ್ಲ ಎಂದು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖವಾಗಿದೆ. ಆದರೆ, ಪಕ್ಷಾಂತರ ನಿಷೇಧಿಸುವ 10ನೇ ಶೆಡ್ಯೂಲ್‌ ಸಂವಿಧಾನದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ. ಇದಿದ್ದಾಗಲೂ ಸುಪ್ರೀಂ ಕೋರ್ಟ್‌ನಿಂದ ಬಂದಿರುವ ಆದೇಶ ನನ್ನ ಹಕ್ಕಿನ ಚ್ಯುತಿ ಮಾಡಿದೆ ಎಂದರು.

ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿತ್ತಿರುವುದು ಒಂದು ಕುಟಿಲ ತಂತ್ರ ಎಂದರು.

ಸಂವಿಧಾನಕ್ಕೆ ತಿದ್ದುಪಡಿ ತಂದು ಪಕ್ಷಾಂತರ ನಿಷೇಧ ಕಾಯಿದೆ ತಂದ ಕೀರ್ತಿ ರಾಜೀವ್‌ ಗಾಂಧಿ ಅವರಿಗೆ ಸಲ್ಲಬೇಕು.ಪಕ್ಷಾಂತರ ನಿಷೇಧ ಕಾಯಿದೆ ಜಾರಿಯಾದಾಗ ಅಂದು ಎಲ್ಲ ಪಕ್ಷಗಳೂ ಸ್ವಾಗತ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT