ಚಿತ್ರನಗರಿ ಎತ್ತಂಗಡಿ; ಸಿದ್ದರಾಮಯ್ಯ ಆಕ್ಷೇಪ

7
ಇಬ್ಬರು ನಾಯಕರ ‘ತವರು’ ರಾಜಕೀಯ

ಚಿತ್ರನಗರಿ ಎತ್ತಂಗಡಿ; ಸಿದ್ದರಾಮಯ್ಯ ಆಕ್ಷೇಪ

Published:
Updated:

ಬೆಂಗಳೂರು: ಉದ್ದೇಶಿತ ‘ಚಿತ್ರನಗರಿ’ಯನ್ನು ಮೈಸೂರಿನಿಂದ ರಾಮನಗರಕ್ಕೆ ಸ್ಥಳಾಂತರ ಮಾಡುವ ನಿರ್ಧಾರಕ್ಕೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಚಿತ್ರನಗರಿಯನ್ನು ತಮ್ಮ ತವರು ಜಿಲ್ಲೆ ಮೈಸೂರಿನಲ್ಲಿ ನಿರ್ಮಿಸುವುದಾಗಿ ತೀರ್ಮಾನಿಸಿ, 100 ಎಕರೆ ಜಾಗವನ್ನೂ ಮಂಜೂರು ಮಾಡಿದ್ದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿರುವ ಬಜೆಟ್‌ನಲ್ಲಿ, ಚಿತ್ರನಗರಿಯನ್ನು ತಾವು ಪ್ರತಿನಿಧಿಸುವ ಜಿಲ್ಲೆ ರಾಮನಗರಕ್ಕೆ ಸ್ಥಳಾಂತರ ಮಾಡುವುದಾಗಿ ಘೋಷಿಸಿದ್ದಾರೆ. ಈ ಕುರಿತು ಪತ್ರ ಬರೆದಿರುವ ಸಿದ್ದರಾಮಯ್ಯ, ಮೈಸೂರಿನಲ್ಲೇ ಚಿತ್ರ ನಗರಿ ನಿರ್ಮಾಣ ಮಾಡಬೇಕು ಎಂದು ಕೋರಿದ್ದಾರೆ.

ಅನ್ನಭಾಗ್ಯ ಅಕ್ಕಿ ಕಡಿತ ಹಾಗೂ ಸಿಂಡಿಕೇಟ್ ಸದಸ್ಯರ ಬದಲಾವಣೆ ಮಾಡದಂತೆ ಈ ಹಿಂದೆ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಆದರೆ, ಮೈತ್ರಿ ಸರ್ಕಾರದ ನೇತಾರ ಕುಮಾರಸ್ವಾಮಿ ಅದನ್ನು ಲಕ್ಷ್ಯಕ್ಕೆ ತೆಗೆದುಕೊಂಡಿರಲಿಲ್ಲ. ಇದೀಗ ಇಬ್ಬರು ನಾಯಕರ ‘ತವರು’ ರಾಜಕೀಯದ ವಿಷಯ ಪತ್ರ ಸಮರಕ್ಕೆ ಕಾರಣವಾಗಿದೆ.

‍ಪ‍ತ್ರದಲ್ಲೇನಿದೆ: ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರ ನಿರ್ಮಾಪಕರು ಇಷ್ಟಪಡುವ ನಗರಿ ಮೈಸೂರು. 1945ರಿಂದಲೂ ಈ ಭಾಗದಲ್ಲಿ ಚಿತ್ರೀಕರಣ ನಡೆಯುತ್ತಲೇ ಇದೆ. ಪ್ರೀಮಿಯರ್ ಸ್ಟುಡಿಯೊ ಸಹ ಹಲವಾರು ಪ್ರತಿಭಾವಂತ ನಟ, ನಟಿಯರು ಹಾಗೂ ತಾಂತ್ರಿಕ ಬಳಗವನ್ನು ಚಿತ್ರರಂಗಕ್ಕೆ ಪರಿಚಯಿಸಿದೆ. 16 ಅರಮನೆಗಳು, 250 ಲೊಕೇಷನ್‌ಗಳು ಇವೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಮೇರು ನಟ ಡಾ.ರಾಜಕುಮಾರ್‌ ಅವರು ಕೂಡ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣವಾಗಬೇಕು ಎಂದು ಕನಸು ಕಂಡಿದ್ದರು. ಇವೆಲ್ಲವನ್ನೂ ಮನಗಂಡು ಹಿಂದಿನ ಕಾಂಗ್ರೆಸ್‌ ಸರ್ಕಾರ, ಚಿತ್ರ ನಗರಿ ನಿರ್ಮಾಣ ಮಾಡುವುದಾಗಿ ಘೋಷಿಸಿತ್ತು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಚಿತ್ರನಗರಿಯನ್ನು ಸ್ಥಳಾಂತರ ಮಾಡುವ ತೀರ್ಮಾನವನ್ನು ಮರುಪರಿಶೀಲಿಸಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಕೋರಿದ್ದಾರೆ.

 

 

 

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !