ಮೋದಿ ಮತ್ತೆ ಬಂದರೆ ಪ್ರಜಾಪ್ರಭುತ್ವಕ್ಕೆ ಅಪಾಯ: ಸಿದ್ದರಾಮಯ್ಯ

ಭಾನುವಾರ, ಏಪ್ರಿಲ್ 21, 2019
25 °C
’ತೇಜಸ್ವಿ ಸೂರ್ಯ: ಅವನಿಗೆ ಅಮಾವಾಸ್ಯೆ ಎಂದು ಹೆಸರಿಡಬೇಕಿತ್ತು'

ಮೋದಿ ಮತ್ತೆ ಬಂದರೆ ಪ್ರಜಾಪ್ರಭುತ್ವಕ್ಕೆ ಅಪಾಯ: ಸಿದ್ದರಾಮಯ್ಯ

Published:
Updated:
Prajavani

ಹಾವೇರಿ: ನರೇಂದ್ರ ಮೋದಿ ಮತ್ತೆ ಬಂದರೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಅದಕ್ಕಾಗಿ ಬಿಜೆಪಿಯನ್ನು ಕೆಳಗೆ ಇಳಿಸಿ, ಅಧಿಕಾರದಿಂದ ಒದ್ದು ಓಡಿಸಲೇ ಬೇಕು ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

‘ಕೋಮುವಾದಿ ಪಕ್ಷ ಬರಲೇ ಬಾರದು ಎಂದು ನಾವು ಮೈತ್ರಿ ಮಾಡಿಕೊಂಡಿದ್ದೇವೆ’ ಎಂದು ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬುಧವಾರ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‌ನ ಡಿ.ಆರ್. ಪಾಟೀಲ ಪರ ಪ್ರಚಾರದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಪ್ರತಿಮೆ ನಾಶ ಮಾಡಿ, ಸಂವಿಧಾನವನ್ನು ಸುಟ್ಟು ಹಾಕಿ ಎಂದು ಹೇಳಿಕೆ ನೀಡಿದವನೇ ಬಿಜೆಪಿ ಅಭ್ಯರ್ಥಿ. ಅವ ಸೂರ್ಯನೋ, ಚಂದ್ರನೋ ಗೊತ್ತಿಲ್ಲ. ಅವನಿಗೆ ‘ಅಮಾವಾಸ್ಯೆ’ ಎಂದು ಹೆಸರು ಇಡಬೇಕಿತ್ತು ಎಂದು ಲೇವಡಿ ಮಾಡಿದರು.

ಮೋದಿ ಹಾಗೂ ಶಾ ಅನುಮತಿ ಇಲ್ಲದೇ ಸಚಿವ ಅನಂತ ಕುಮಾರ ಹೆಗಡೆ, ‘ಸಂವಿಧಾನ ಬದಲು ಮಾಡುತ್ತೇನೆ’ ಎಂದು ಹೇಳಲು ಸಾಧ್ಯವಿಲ್ಲ. ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಭಾರತದ ಪ್ರಜೆಯಾಗಲು ನಾಲಾಯಕ್ ಎಂದರು. 

ನಾವು (ಮೈತ್ರಿ) ಹಿಂದುಳಿದವರಿಗೆ 7, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 7 ಹಾಗೂ ಇತರರಿಗೆ 14 ಸ್ಥಾನ ನೀಡಿದ್ದೇವೆ. ಬಿಜೆಪಿಯವರು 28 ಕ್ಷೇತ್ರಗಳ ಪೈಕಿ ಒಂದೇ ಒಂದೇ ಕಡೆ ಹಿಂದುಳಿದವರಿಗೆ ಸೀಟು ಕೊಟ್ಟಿಲ್ಲ. ಈಶ್ವರಪ್ಪಗೆ ಮಾನ ಮರ್ಯಾದೆ ಇದ್ದರೆ, ಬಿಜೆಪಿ ಬಿಟ್ಟು ಹೊರಬರಲಿ ಎಂದು ಸವಾಲು ಹಾಕಿದರು.  

ಅಪ್ಪನ ನೋಡಿ ಮಗಳ ಕೊಡ್ತಾರಾ?

‘ಏನೂ ಕೆಲಸ ಮಾಡದ ಬಿಜೆಪಿ ಸಂಸದರು, ಮೋದಿ ನೋಡಿ ವೋಟು ಕೊಡಿ ಎನ್ನುತ್ತಿದ್ದಾರೆ’ ಎಂದ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ, ‘ಹುಡುಗನ ನೋಡಿ ಹೆಣ್ಣು ಕೊಡ್ತಾರೆ. ಆದರೆ, ಹುಡುಗನ ಅಪ್ಪನ ನೋಡಿ ಹೆಣ್ಣು ಕೊಡ್ತಾರಾ?’ ಎಂದು ವ್ಯಂಗ್ಯವಾಡಿದರು. 
ಬಿಜೆಪಿಯಲ್ಲಿ ಚುನಾವಣೆ ತನಕ ಯಡಿಯೂರಪ್ಪ ‘ಹಿಂದೂ’, ಅಧಿಕಾರ ಬಂದರೆ ಹೆಗಡೆ ‘ಮುಂದು’ ಎಂದು ಲೇವಡಿ ಮಾಡಿದ ಅವರು, 8 ಲಿಂಗಾಯತ ಸಂಸದರಿದ್ದರೂ ಸಚಿವ ಸ್ಥಾನ ನೀಡಿಲ್ಲ ಎಂದು ದೂರಿದರು.  

‘ಅಂಬೇಡ್ಕರ್ ಪ್ರತಿಮೆ ನಾಶ ಮಾಡಬೇಕು ಎಂದು ತೇಜಸ್ವಿ ಸೂರ್ಯ ಹೇಳಿಕೆ ನೀಡ್ತಾನೆ. ಆದ್ರೂ ಬಿಜೆಪಿಯಿಂದ ಶ್ರೀನಿವಾಸ ಪ್ರಸಾದ್ ಸ್ಪರ್ಧಿಸುತ್ತಾರೆ’ ಎಂದು ಟಾಂಗ್ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !