ಸಿಜಾರೆ ಬಾಬಾ ನಿಧನ

7

ಸಿಜಾರೆ ಬಾಬಾ ನಿಧನ

Published:
Updated:

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಸಮೀಪ ಇರುವ ಋಷ್ಯಮುಖ ಪರ್ವತದ ನಿವಾಸಿ, ಇಟಲಿಯ ರೋಮ್ ನಗರದ ಸಿಜಾರೆ ಬಾಬಾ (80) ಗುರುವಾರ ರಾತ್ರಿ ನಿಧನರಾದರು.

ಇಲ್ಲಿನ ವೈವಿಧ್ಯಮಯ ಸಂಸ್ಕೃತಿ, ಭಾರತೀಯ ಸಂಪ್ರದಾಯ ಹಾಗೂ ಹಿಂದೂ ಧರ್ಮದಲ್ಲಿನ ಆಚರಣೆಗಳಿಗೆ ಮಾರು ಹೋಗಿ ಇಲ್ಲಿ ನೆಲೆಸಿದ್ದರು.

ಕ್ಯಾಥೋಲಿಕ್ ಕ್ರೈಸ್ತ ಪಂಗಡಕ್ಕೆ ಸೇರಿದ್ದ ಇವರು, ಹಿಂದೂ ಧರ್ಮಕ್ಕೆ ಮತಾಂತರಗೊಂಡು ಶಿವನ ಆರಾಧಕರಾಗಿದ್ದರು. ಮೂರುವರೆ ದಶಕದಿಂದ ಋಷ್ಯಮುಖ ಪರ್ವತದ ಸಮೀಪ ಕುಟೀರ ನಿರ್ಮಿಸಿಕೊಂಡಿದ್ದರು..

‘ಬಾಬಾ ಅವರ ಅಂತ್ಯಕ್ರಿಯೆಯನ್ನು ಇಲ್ಲಿಯೇ ಮಾಡುವಂತೆ ರೋಮ್‌ ನಗರದಲ್ಲಿ ಇರುವ ಅವರ ಸಹೋದರಿ ಮೋಚಿ ತಿಳಿಸಿದ್ದಾರೆ’ ಎಂದು ಅನುಯಾಯಿ ಆನಾ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !