ಮಂಗಳವಾರ, ಸೆಪ್ಟೆಂಬರ್ 17, 2019
22 °C

ಅಮೆರಿಕದಲ್ಲಿ ಸಿಂಧನೂರು ಯುವಕ ಸಾವು

Published:
Updated:
Prajavani

ರಾಯಚೂರು: ಅಮೆರಿಕದ ಟೆಕ್ಸಾಸ್‌ ಯುನಿರ್ವಸಿಟಿ ಆಫ್‌ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್‌ ಓದುತ್ತಿದ್ದ ಜಿಲ್ಲೆಯ ಸಿಂಧನೂರು ನಗರದ ಶ್ರೀಪುರಂ ಜಂಕ್ಷನ್‌ ನಿವಾಸಿ ಅಜೇಯಕುಮಾರ್‌ ಮೋಡಿ (23) ಅವರು ಟೆಕ್ಸಾಸ್‌ ಬಳಿಯ ಟರ್ನರ್‌ ವಾಟರ್‌ ಫಾಲ್ಸ್‌ನಲ್ಲಿ ಮುಳುಗುತ್ತಿದ್ದ ಗೆಳೆಯನನ್ನು ಬದುಕಿಸುವುದಕ್ಕೆ ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ತಂದೆ ಶ್ರೀನಿವಾಸ್ ರೈತರು. ಪುತ್ರನ ಸಾವಿನಿಂದ ಕುಟುಂಬದ ಸದಸ್ಯರೆಲ್ಲರೂ ಶೋಕದಲ್ಲಿ ಮುಳುಗಿದ್ದಾರೆ. ಮೃತದೇಹವು ಸಿಂಧನೂರಿಗೆ ಗುರುವಾರ ಸಂಜೆ ಬರಬಹುದು ಎಂದು ಕುಟುಂಬದ ಸಂಬಂಧಿಗಳು ತಿಳಿಸಿದ್ದಾರೆ.

ಸಿಂಧನೂರಿನಲ್ಲಿ ಪ್ರೌಢಶಾಲೆ, ಬಳ್ಳಾರಿಯಲ್ಲಿ ಕಾಲೇಜು ಹಾಗೂ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಪೂರ್ಣಗೊಳಿಸಿದ ಬಳಿಕ ಉನ್ನತ ಶಿಕ್ಷಣಕ್ಕಾಗಿ ಅಜೇಯ ಅವರು ಅಮೆರಿಕಕ್ಕೆ ತೆರಳಿ ಒಂದು ವರ್ಷವಾಗಿತ್ತು.

Post Comments (+)