ಕ್ರೇನ್‌ ಬಿದ್ದು ಆರು ಕಾರ್ಮಿಕರ ಸಾವು

7

ಕ್ರೇನ್‌ ಬಿದ್ದು ಆರು ಕಾರ್ಮಿಕರ ಸಾವು

Published:
Updated:

ಸೇಡಂ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಕೋಡ್ಲಾ– ಬೆನಕನಹಳ್ಳಿ ಮಧ್ಯೆ ಇರುವ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಗುರುವಾರ ರಾತ್ರಿ ಕ್ರೇನ್‌ ಬಿದ್ದು ಆರು ಕಾರ್ಮಿಕರು ಮೃತಪಟ್ಟಿದ್ದಾರೆ. ಕೆಲವರು ಗಂಭೀರ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಬಿಹಾರ್ ಮೂಲದ ತಬಾರಕ್ ಅಲಿ (25) ಸ್ಥಳದಲ್ಲೇ ಮೃತಪಟ್ಟಿದ್ದು, ಕಲಬುರ್ಗಿಯ ಯುನೈಟೆಡ್‌ ಆಸ್ಪತ್ರೆಯಲ್ಲಿ ಪಿ.ಟಿ. ಕಂಚನ್‌, ಸುಧಾಕರ್‌, ಜುಬೇರ್‌ ಮೃತಪಟ್ಟರೆ, ಚಿರಾಯು ಆಸ್ಪತ್ರೆಯಲ್ಲಿ ಬಿತಿನ್‌ ಹಾಗೂ ಅಜಯ್‌ ಕೊನೆಯುಸಿರೆಳೆದರು. ಘಟನೆಯಲ್ಲಿ ಇನ್ನೂ ಕೆಲವರು ಗಾಯಗೊಂಡಿದ್ದಾರೆ.

ಕಾರ್ಮಿಕರು ಎಂದಿನಂತೆ ವೆಲ್ಡಿಂಗ್‌ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಬಿರುಗಾಳಿಯಿಂದ ಕ್ರೇನ್‌ ಕುಸಿದು ಅವಘಡ ಸಂಭವಿಸಿದೆ ಎಂದು ತಿಳಿಸಲಾಗಿದೆ.

ಕ್ರೇನ್‌ ಬಿದ್ದಾಗ ಹಲವರು ಕಾರ್ಮಿಕರು ಅದರಡಿ ಸಿಲುಕಿಕೊಂಡರು. ತಬಾರಕ್‌ ಕೆಲವೇ ಕ್ಷಣಗಳಲ್ಲಿ ಮೃತಪಟ್ಟರು. ತೀವ್ರ ಗಾಯಗೊಂಡ ನಾಲ್ವರನ್ನು ನಗರಕ್ಕೆ ಸಾಗಿಸಲಾಯಿತು. ಆದರೂ ಪ್ರಯೋಜನವಾಗಲಿಲ್ಲ.

ಉಳಿದ ಗಾಯಾಳುಗಳಿಗೆ ಸೇಡಂನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !