ಬೀಡಿ ಸೇದಿದ ಶಿಕ್ಷಕರಿಬ್ಬರ ಅಮಾನತು..!

7

ಬೀಡಿ ಸೇದಿದ ಶಿಕ್ಷಕರಿಬ್ಬರ ಅಮಾನತು..!

Published:
Updated:

ಸಿಂದಗಿ (ವಿಜಯಪುರ): ಶಾಲಾ ಅವಧಿಯಲ್ಲಿ, ಮುಖ್ಯೋಪಾಧ್ಯಾಯರ ಕೊಠಡಿಯೊಳಗೆ ಬೀಡಿ ಸೇದಿದ ಶಿಕ್ಷಕರಿಬ್ಬರನ್ನು ಅಮಾನತುಗೊಳಿಸಲಾಗಿದೆ.

ಸಿಂದಗಿ ತಾಲ್ಲೂಕಿನ ಚಟ್ಟರಕಿ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಜೆ.ಎಂ.ಮೋಮಿನ್, ಆರ್.ಎನ್.ಇನಾಮದಾರ ಅಮಾನತುಗೊಂಡವರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಈ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ವಿವರವಾದ ವರದಿ ಸಲ್ಲಿಸಿದ್ದರಿಂದ ಡಿ.ಡಿ.ಪಿ.ಐ ಈ ಅಮಾನತು ಆದೇಶ ಹೊರಡಿಸಿದ್ದಾರೆ.

‘ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್‌ ಬಿರಾದಾರ ಚಟ್ಟರಕಿ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಂದರ್ಭ, ಮುಖ್ಯೋಪಾಧ್ಯಾಯರು ನಮಾಜು ಮಾಡಲಿಕ್ಕೆ ಹೋಗಿದ್ದರು. ಈ ಇಬ್ಬರು ಮುಖ್ಯ ಶಿಕ್ಷಕರ ಕೊಠಡಿಯೊಳಗೆ ಬೀಡಿ ಸೇದುತ್ತಿದ್ದರು. ಈ ಘಟನೆ ಬಗ್ಗೆ ಬಿಇಓ ನೀಡಿದ ವರದಿ ಆಧರಿಸಿ, ಅಮಾನತುಗೊಳಿಸಲಾಗಿದೆ’ ಎಂದು ಡಿಡಿಪಿಐ ಆದೇಶದಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !