ಬಹುಮತ ಸಿಕ್ಕಿಲ್ಲ ಎಂದು ಸಿಎಂ ಕಣ್ಣೀರು ಹಾಕಿರಬಹುದು: ಎಸ್.ಎನ್.ಸುಬ್ಬಾರೆಡ್ಡಿ

7

ಬಹುಮತ ಸಿಕ್ಕಿಲ್ಲ ಎಂದು ಸಿಎಂ ಕಣ್ಣೀರು ಹಾಕಿರಬಹುದು: ಎಸ್.ಎನ್.ಸುಬ್ಬಾರೆಡ್ಡಿ

Published:
Updated:

ಬಾಗೇಪಲ್ಲಿ: ‘ವಿಧಾನಸಭೆ ಚುನಾವಣೆಯಲ್ಲಿ 120 ಸ್ಥಾನ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಜನರಿಗೆ ಅನೇಕ ಭರವಸೆಗಳನ್ನು ನೀಡಿದ್ದರು. ಆದರೆ ರಾಜ್ಯದ ಮತದಾರರು ಅವರಿಗೆ ಸಂಪೂರ್ಣ ಅಧಿಕಾರ ನೀಡಲಿಲ್ಲ. ಹೀಗಾಗಿ ಜೆಡಿಎಸ್‌ ಸ್ವತಂತ್ರ ಸರ್ಕಾರ ರಚನೆ ಮಾಡಲು ಆಗಲಿಲ್ಲ ಎಂಬ ಕಾರಣಕ್ಕೆ ಅವರು ಕಣ್ಣೀರು ಸುರಿಸಿರಬಹುದು’ ಎಂದು ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಹೇಳಿದರು. 

ತಾಲ್ಲೂಕಿನ ಬಿಳ್ಳೂರು ಹಾಗೂ ಚಾಕವೇಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಂಗಳವಾರ ‘ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ’ (ಪಿಎಂಜಿಎಸ್‌ವೈ) ಅಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 

‘ರೈತರ ಸಾಲ ಮನ್ನಾ ವಿಚಾರದಲ್ಲಿ ಕಾಂಗ್ರೆಸ್‌ಗೆ ಶೇ 65 ರಷ್ಟು ಮತ್ತು ಜೆಡಿಎಸ್‌ಗೆ ಶೇ 35 ರಷ್ಟು ಶ್ರೇಯಸ್ಸು ದೊರಕಬೇಕು. ರೈತರ ಸಾಲ ಮನ್ನಾ ಮಾಡಿರುವುದು ಸಂತಸದ ವಿಚಾರ. ಆದರೆ ಭವಿಷ್ಯದಲ್ಲಿ ರೈತರ ಸಾಲ ಮನ್ನಾ ಬೇಡ. ಇದರಿಂದ ಪ್ರಾಮಾಣಿಕರು ಸಹ ಸಾಲ ಮರುಪಾವತಿ ಮಾಡುವುದಿಲ್ಲ. ಅದರಿಂದ ಬ್ಯಾಂಕಿಂಗ್‌ ವ್ಯವಸ್ಥೆ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

‘ಅನ್ನಭಾಗ್ಯ ಯೋಜನೆಯ ಅಕ್ಕಿಯ ಪ್ರಮಾಣದಲ್ಲಿ ಎರಡು ಕೆ.ಜಿ. ಇಳಿಕೆ ಮಾಡಿರುವುದು ಬಡವರಿಗೆ ಮೋಸ ಮಾಡಿದಂತಾಗುತ್ತದೆ. ಮೊದಲಿನ ಪ್ರಮಾಣದಲ್ಲಿಯೇ ಅನ್ನಭಾಗ್ಯ ಅಕ್ಕಿ ನೀಡಬೇಕು. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಿಸಿದ್ದರು. ಅದೇ ರೀತಿ ಕುಮಾರಸ್ವಾಮಿ ಅವರು ಎಲ್ಲ ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ ನೀಡಲು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !