ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ: ದೂರು ದಾಖಲು

7

ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ: ದೂರು ದಾಖಲು

Published:
Updated:

ಮೂಡುಬಿದಿರೆ: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ತೆರೆದು ಕೋಮು ಪ್ರಚೋದನಕಾರಿ ಸಂದೇಶಗಳನ್ನು ರವಾನಿಸುತ್ತಿದ್ದ ಸುಳ್ಯದ ನಿವಾಸಿ ವಿರುದ್ಧ ಮೂಡುಬಿದಿರೆಯ ವ್ಯಾಪಾರಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸುಳ್ಯ ತಾಲ್ಲೂಕಿನ ಮುರುಳ್ಯ ಗ್ರಾಮದ ನಿವಾಸಿ ಇಬ್ರಾಹಿಂ ಖಲೀಲ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಪ್ರಸ್ತುತ ಈತ ಅಬುಧಾಬಿಯಲ್ಲಿ ನೆಲೆಸಿದ್ದು, ಫೇಸ್‌ಬುಕ್‌ನಲ್ಲಿ ಹಿಂದೂ ಹೆಸರಿನ ಮತ್ತು ಇಸ್ಲಾಂ ಹೆಸರಿನ ಹಲವು ನಕಲಿ ಖಾತೆಗಳನ್ನು ತೆರೆದು, ಪರ–ವಿರೋಧ ಕೋಮು ಪ್ರಚೋದನಾಕಾರಿ ಸಂದೇಶ ರವಾನಿಸಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದ ಎಂದು ದೂರಲಾಗಿದೆ.

ದೇವದಾಸ್ ದಲಿತ ಎಂಬ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆಯನ್ನು ತೆರೆದು ಮುಸ್ಲಿಂ ಯುವಕರಿಗೆ ಆಕ್ಷೇಪಾರ್ಹ ಸಂದೇಶ ರವಾನಿಸುತ್ತಿದ್ದ ಆರೋಪ ಈತನ ಮೇಲಿದೆ. ಹಿಂದೆ ಮುಸ್ಲಿಂ ಧರ್ಮಗುರು ಪೈಯಕ್ಕಿ ಉಸ್ತಾದ್ ವಿರುದ್ಧವೇ ಅವಹೇಳನಕಾರಿ ಸಂದೇಶ ರವಾನಿಸಿ, ಇತ್ತೀಚೆಗೆ ಅವರ ಸಾವಿನ ಸಂದರ್ಭ ಸಿಕ್ರ್‌ ಕೂಟಕ್ಕೆ ಒಂದು ವಿಕೆಟ್ ಪತನ ಎಂದು ಹೇಳಿಕೊಂಡು ಇನ್ನೊಬ್ಬರ ಹೆಸರಿನಲ್ಲಿ ಮುಸ್ಲಿಂ ಧರ್ಮವನ್ನು ಟೀಕಿಸಿದ್ದ.

ಸಲಾಫಿ ಪಂಗಡಕ್ಕೆ ಸೇರಿರುವ ಈತ ಸುನ್ನಿ ಪಂಗಡದ ಧರ್ಮಗುರುಗಳನ್ನು ತನ್ನ ನಕಲಿ ಖಾತೆಗಳಲ್ಲಿ ಅವಹೇಳನಮಾಡುತ್ತಿದ್ದ. ಈ ವಿಚಾರ ಸುನ್ನಿ ಮುಖಂಡರಿಗೆ ಗೊತ್ತಾಗಿ ಈತನನ್ನು ಪತ್ತೆ ಹಚ್ಚಿ ಪೊಲೀಸರಿಗೆ ದೂರು ನೀಡಿದ್ದರು.

ಮೂಡುಬಿದಿರೆಯ ಅಬ್ದುಲ್ ಲತೀಫ್ ಹಾಗೂ ಅವರ ಕುಟುಂಬದ ಬಗ್ಗೆಯು ಈತ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದ ಎನ್ನಲಾಗಿದೆ. ಲತೀಫ್ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !