ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಎಸಿಬಿ ಬಲೆಗೆ

7

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಎಸಿಬಿ ಬಲೆಗೆ

Published:
Updated:
Deccan Herald

ಮಡಿಕೇರಿ: ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದಾಗ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ ಹಾಗೂ ಪ್ರಥಮದರ್ಜೆ ಸಹಾಯಕ ಕೆ.ಬಿ.ಮೋಹನ್‌ ಇಲ್ಲಿ ಗುರುವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತಾಲ್ಲೂಕಿನ ಮೇಕೇರಿಯ ಶಕ್ತಿನಗರದ ನಿವಾಸಿ ನಳಿನಿ ಅವರಿಂದ ₹ 20 ಸಾವಿರ ಲಂಚ ಪಡೆಯುತ್ತಿದ್ದಾಗ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದರು. ದೌರ್ಜನ್ಯ ಪ್ರಕರಣದಲ್ಲಿ ನಳಿನಿ ಕುಟುಂಬಕ್ಕೆ ಸರ್ಕಾರದಿಂದ ₹ 4 ಲಕ್ಷ ಪರಿಹಾರ ಮಂಜೂರಾಗಿತ್ತು. ಅದರ ಚೆಕ್‌ ನೀಡಲು ಲಂಚ ಕೇಳಿದ್ದರು. ನಳಿನಿ ಅವರು ಮೊಬೈಲ್‌ ರೆಕಾರ್ಡ್‌ ಸಹಿತ ಎಸಿಬಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. 

ಡಿವೈಎಸ್‌ಪಿ ಪೂರ್ಣಚಂದ್ರ ತೇಜಸ್ವಿ, ಇನ್‌ಸ್ಪೆಕ್ಟರ್‌ ಶೇಖರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !