ಮತ್ತೆ ಭೂಮಿಯೊಳಗಿನಿಂದ ಸದ್ದು: ಬೆಚ್ಚಿ ಬಿದ್ದ ಜನ

7

ಮತ್ತೆ ಭೂಮಿಯೊಳಗಿನಿಂದ ಸದ್ದು: ಬೆಚ್ಚಿ ಬಿದ್ದ ಜನ

Published:
Updated:

ಕೊಗ್ರೆ (ಬಾಳೆಹೊನ್ನೂರು): ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ ಭೂಮಿಯೊಳಗಿಂದ ಮತ್ತೆ ಭಾರಿ ಸದ್ದು ಕೇಳಿಬಂದ ಕಾರಣ ಜನತೆ ಮತ್ತೊಮ್ಮೆ ಬೆಚ್ಚಿಬಿದ್ದಿದ್ದಾರೆ.

ಶುಕ್ರವಾರ ಬೆಳಿಗ್ಗೆ ಭೂಮಿಯೊಳಗಿಂದ ಭಾರಿ ಸದ್ದು ಕೇಳಿ ಬಂದ ಸುದ್ದಿ ಮರೆಯಾಗುವ ಮುನ್ನವೇ ಭಾನುವಾರ ಮಧ್ಯಾಹ್ನ 2.58ಕ್ಕೆ ಅತ್ತಿಕೊಡಿಗೆ ಹಾಗೂ ಶಾಂತಿಗ್ರಾಮ, ಅಬ್ಬಿಕಲ್ಲು ವ್ಯಾಪ್ತಿಯಲ್ಲಿ ಭೂಮಿಯ ಒಳಭಾಗದಿಂದ ಸ್ಫೋಟದ ಸದ್ದು ಕೇಳಿಬಂದಿದೆ. ಭಯಭೀತರಾದ ಜನರು ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಾರೆ.

‘3 ತಿಂಗಳಿನಿಂದಲೂ ಆಗಾಗ ಅತ್ತಿಕೊಡಿಗೆ ಸಮೀಪದ ಹೊಸನೆಲ ಬಳಿ ನೆಲದಾಳದಲ್ಲಿ ಸ್ಫೋಟದ ಸದ್ದು ಕೇಳಿಬರುತ್ತಿದೆ. ಭಾನುವಾರ ಕೂಡ ಭಾರಿ ಪ್ರಮಾಣದ ಸದ್ದು ನೆಲದಾಳದಿಂದ ಕೇಳಿ ಬಂದಿದ್ದು ಕೆಲ ಕ್ಷಣ ಮೈ ಜುಂ ಎನಿಸಿತು’ ಎನ್ನುತ್ತಾರೆ ಹೊಸನೆಲದ ಚೇತನ್.

‘ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4ರಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಶಬ್ದ ಕೇಳಿಬರುತ್ತಿತ್ತು. ಶಬ್ದ ಕೇಳಿ ನಾಯಿಗಳು ಬೊಗಳಲು ಆರಂಭಿಸಿದವು’ ಎನ್ನುತ್ತಾರೆ ಕೊಗ್ರೆ ಎಸ್ಟೇಟ್‌ನ ಕೆ.ಎಲ್.ಚಂದ್ರಶೇಖರ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !