ಸದನಕ್ಕೆ ಗೈರು ಗದರಿದ ಸಭಾಧ್ಯಕ್ಷ

7

ಸದನಕ್ಕೆ ಗೈರು ಗದರಿದ ಸಭಾಧ್ಯಕ್ಷ

Published:
Updated:
Deccan Herald

ಬೆಳಗಾವಿ: ‘ಇಷ್ಟು ದಿನ ಎಲ್ಲಿ ಹೋಗಿದೆಯಪ್ಪ, ಈಗ್ಯಾಕೆ ಸದನಕ್ಕೆ ಬಂದೆ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್
ಅವರು ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿ ನಡೆಯುತ್ತಿತ್ತು. ಈ ವೇಳೆ ಹಿಟ್ನಾಳ ಅವರು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಬಳಿ ಬಂದು ಕೂತರು. ಆಗ ರಮೇಶ್‌ ಕುಮಾರ್ ಅವರು ಗೈರುಹಾಜರಿ ಕುರಿತು ಪ್ರಶ್ನಿಸಿದರು. ಹಿಟ್ನಾಳ ಗಲಿಬಿಲಿಗೊಂಡು ತಲೆಯಾಡಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಿದ್ದ ಆನೇಕಲ್‌ ಶಾಸಕ ಬಿ.ಶಿವಣ್ಣಕ್ಕೆ ಗೈರುಹಾಜರಾಗಿದ್ದರು. ‘ಸದನಕ್ಕೆ ಬರುವುದಿಲ್ಲ ಎಂದ ಮೇಲೆ ಪ್ರಶ್ನೆ ಕೇಳುವುದು ಏಕೆ. ನನಗೆ ಬೇರೆ ಕೆಲಸ ಇಲ್ಲವೇ’ ಎಂದು ಕಟುವಾಗಿ ಪ್ರಶ್ನಿಸಿದರು. 

ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೋಮವಾರ ಸದನಕ್ಕೆ ಬಂದಿರಲಿಲ್ಲ. ಮಂಗಳವಾರ 12 ಗಂಟೆ ವೇಳೆ ಬಂದರು. ‘ಹೇಳದೆ ಕೇಳದೆ ಎಲ್ಲಿ ಹೋಗಿದ್ದೀರಿ ಲಿಂಬಾವಳಿಯವರೇ. ಸದನಕ್ಕೆ ನೀವು ಹಿರಿಯ ಸದಸ್ಯರು ಎಂಬುದು ನೆನಪಿರಲಿ’ ಎಂದು ಕಿವಿಮಾತು
ಹೇಳಿದರು.

ಸದನದ ನಿಯಮಾವಳಿಗಳನ್ನು ಮೀರಿ ಎದ್ದು ನಿಂತು ಮಾತನಾಡುತ್ತಿದ್ದ ಶಾಸಕರನ್ನು ಸಭಾಧ್ಯಕ್ಷರು ತರಾಟೆಗೆ ತೆಗೆದುಕೊಂಡರು. ‘ತರಬೇತಿಗೆ ಬರುವುದಿಲ್ಲ. ನಿಯಮಾವಳಿಗಳನ್ನು ತಿಳಿದುಕೊಳ್ಳುವುದಿಲ್ಲ. ಹೀಗೆ ಮಾಡಿದರೆ ಸದನ ನಡೆಸುವುದು ಹೇಗೆ’ ಎಂದು ಪ್ರಶ್ನಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !