ಅರಣ್ಯ ಇಲಾಖೆಯಿಂದ ವಿಶೇಷ ಕೂಂಬಿಂಗ್ ತಂಡ

7

ಅರಣ್ಯ ಇಲಾಖೆಯಿಂದ ವಿಶೇಷ ಕೂಂಬಿಂಗ್ ತಂಡ

Published:
Updated:

ಕಾರ್ಗಲ್: ಮಲೆನಾಡಿನ ಅರಣ್ಯ ಭಾಗದಲ್ಲಿ ಸತ್ತ ಮಂಗಳನ್ನು ಪತ್ತೆಹಚ್ಚಿ, ಅಲ್ಲೇ ಅವುಗಳನ್ನು ಸುಡಲು ಅರಣ್ಯ ಇಲಾಖೆ ಕೂಂಬಿಂಗ್ ಆರಂಭಿಸಲಾಗಿದೆ.

ಸಾಗರ ತಾಲ್ಲೂಕಿನ ಅರಳಗೋಡಿನಲ್ಲಿ ಮಂಗನಕಾಯಿಲೆಗೆ 6 ಜನರು ಬಲಿಯಾದ ನಂತರ ಸತ್ತ ಮಂಗಗಳ ಪತ್ತೆಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಅರಣ್ಯ ವೀಕ್ಷಕರು, ಅರಣ್ಯ ಪಾಲಕರು, ಅಧಿಕಾರಿಗಳ ತಂಡ ಪ್ರತಿ ದಿನವೂ ನಿರ್ದಿಷ್ಟ ಪ್ರದೇಶದ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ಸತ್ತ ಮಂಗಗಳನ್ನು ಪತ್ತೆ ಹಚ್ಚಲಿದೆ.

ಮಂಗಗಳ ಪತ್ತೆಗೆ ಹೊರಡುವ ಸಿಬ್ಬಂದಿ ಕೈ, ಮೈಗಳಿಗೆ ಹಚ್ಚಿಕೊಳ್ಳಲು ಡಿಎಂ‍ಪಿ ಎಣ್ಣೆ, ಸಂರಕ್ಷಣಾ ಪರಿಕರ ವಿತರಿಸಲಾಗುತ್ತಿದೆ. ಗ್ರಾಮಗಳ ಸುತ್ತಲೂ ಮಥಾಲಿಯನ್ ಪುಡಿ ಹಾಗೂ ಸುಣ್ಣ ಎರಚಲಾಗುತ್ತಿದೆ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಜೆ. ಚಂದ್ರಶೇಖರ್ ಮಾಹಿತಿ ನೀಡಿದರು.

ತಿಂಗಳಲ್ಲಿ ಒಟ್ಟು 18 ಪ್ರಕರಣ ಪತ್ತೆಯಾಗಿವೆ. ಮೃತಪಟ್ಟ 6 ಜನರಲ್ಲಿ 4 ದೃಢಪಟ್ಟಿವೆ. ಉಳಿದ ಇಬ್ಬರ ಪರೀಕ್ಷಾ ವರದಿ ಬಂದಿಲ್ಲ. 6 ಜನ ಸಾಗರದಲ್ಲಿ 6 ಜನರು ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಎಚ್‌ಒ ವೆಂಕಟೇಶ್ ವಿವರ ನೀಡಿದರು.

ಮಣಿಪಾಲ ವರದಿ: ಸಾಗರ ತಾಲ್ಲೂಕಿನ  41 ಜನರು ಶಂಕಿತ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯಲು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ 6 ಜನರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !