ಅಂಗವಿಕಲರಿಗಾಗಿ 35 ಸಾವಿರ ವ್ಹೀಲ್‌ಚೇರ್‌, 52 ಸಾವಿರ ಭೂತಕನ್ನಡಿ ವ್ಯವಸ್ಥೆ

ಗುರುವಾರ , ಏಪ್ರಿಲ್ 25, 2019
33 °C
ಲೋಕಸಭೆ ಚುನಾವಣೆ

ಅಂಗವಿಕಲರಿಗಾಗಿ 35 ಸಾವಿರ ವ್ಹೀಲ್‌ಚೇರ್‌, 52 ಸಾವಿರ ಭೂತಕನ್ನಡಿ ವ್ಯವಸ್ಥೆ

Published:
Updated:
Prajavani

ಬೆಂಗಳೂರು: ಲೋಕಸಭೆ ಚುನಾವಣೆಯ ಮತದಾರರ ಪಟ್ಟಿಯಲ್ಲಿ 4,03,907 ಮಂದಿ ಅಂಗವಿಕಲರಿದ್ದು, ಅವರ ಮತದಾನಕ್ಕೆ ಅನುಕೂಲ ಆಗುವಂತೆ ಗಾಲಿಕುರ್ಚಿ ಸೇರಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್ ತಿಳಿಸಿದರು.

58,186 ಮತಗಟ್ಟೆಗಳಲ್ಲಿ ಅಂಗವಿಕಲರು ಇರುವುದನ್ನು ಗುರುತಿಸಲಾಗಿದೆ. ಅವರು ಮತಗಟ್ಟೆಗೆ ಬಂದು ಹೋಗಲು ವಾಹನ ವ್ಯವಸ್ಥೆ, ಮತಗಟ್ಟೆಯಲ್ಲಿ ರ‍್ಯಾಂಪ್‌ ಅಳವಡಿಕೆ, ಅಂಧರಿಗಾಗಿ ಮತಯಂತ್ರದಲ್ಲಿ ಬ್ರೈಲ್‌ ಲಿಪಿ ಅಳವಡಿಸಲಾಗುವುದು. ಮಂದ ದೃಷ್ಟಿ ಉಳ್ಳವರಿಗೆ ಭೂತಕನ್ನಡಿ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ರಾಜ್ಯದಲ್ಲಿ 4,03,907 ಜನ ಅಂಗವಿಕಲರಿದ್ದಾರೆ. ಅವರಿಗೆ ಅಗ್ಯವಿರುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಅದಕ್ಕಾಗಿ ಸದ್ಯ 35,739 ವ್ಹೀಲ್‌ಚೇರ್‌ಗಳು, 52,000 ಭೂತಕನ್ನಡಿಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಸರತಿ ಸಾಲಿನಲ್ಲಿ ಆದ್ಯತೆ ನೀಡಲಾಗುವುದು. ಇವರ ನೆರವಿಗಾಗಿಯೇ 31,515 ಜನ ಸಹಾಯಕರು, 625 ಮಂದಿ ಸಂಜ್ಞಾಭಾಷಾ ವಿವರಣೆಗಾರರನ್ನು ನೇಮಿಸಲಾಗಿದೆ.

₹1.56 ಕೋಟಿ ನಗದು ವಶ: ಅಕ್ರಮವಾಗಿ ಸಾಗಿಸುತ್ತಿದ್ದ ₹ 1.56 ಕೋಟಿ ನಗದು, 21.50 ಲಕ್ಷ ಮೌಲ್ಯದ ಮದ್ಯ, 1.47 ಕೋಟಿ ಮೌಲ್ಯದ ಇತರ ವಸ್ತುಗಳನ್ನು ಸರ್ವೆಲೆನ್ಸ್‌ ತಂಡಗಳು ವಶಪಡಿಸಿಕೊಂಡಿವೆ. ಅಬಕಾರಿ ಇಲಾಖೆಯು ಈವರೆಗೆ ₹16.31 ಲಕ್ಷ ಮೌಲ್ಯದ 3.61 ಲಕ್ಷ ಲೀಟರ್ ಮದ್ಯ ವಶಪಡಿಸಿಕೊಂಡಿದೆ ಎಂದರು.

ಗಿರೀಶ್ ರಾಯಭಾರಿ: ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಜಾಗೃತಿ ಮೂಡಿಸಲು 2012ರ ಪ್ಯಾರಾ ಒಲಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಗಿರೀಶ್ ಎನ್‌.ಗೌಡ ಅವರು ರಾಯಭಾರಿಯಾಗಿ ಮುಂದುವರಿಯಲಿದ್ದಾರೆ ಎಂದು ಸಂಜೀವ್‌ ಕುಮಾರ್ ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !