ಮಂಗಳವಾರ, ಅಕ್ಟೋಬರ್ 15, 2019
22 °C

ದೀಪಾವಳಿ: ಬೆಂಗಳೂರು–ಬೀದರ್‌ ಮಧ್ಯೆ ಸುವಿಧಾ ವಿಶೇಷ ರೈಲು

Published:
Updated:

ಕಲಬುರ್ಗಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣಿಯನ್ನು ನಿವಾರಿಸಲು ನೈರುತ್ಯ ರೈಲ್ವೆಯು ಅಕ್ಟೋಬರ್‌ 25 ಹಾಗೂ 28ರಂದು ಬೆಂಗಳೂರು–ಬೀದರ್‌ ಮಧ್ಯೆ ವಿಶೇಷ ಸುವಿಧಾ ರೈಲನ್ನು ಓಡಿಸಲಿದೆ.

ಬೆಂಗಳೂರಿನ ಯಲಹಂಕದಿಂದ ಅ 25 ಹಾಗೂ 28ರಂದು ಸಂಜೆ 5ಕ್ಕೆ ಹೊರಡುವ ಸುವಿಧಾ ರೈಲು (82661) ಗೌರಿಬಿದನೂರು, ಹಿಂದುಪುರ, ಧರ್ಮಾವರಂ, ಅನಂತಪುರ, ಗುಂತಕಲ್‌, ಮಂತ್ರಾಲಯ ರೋಡ್‌, ರಾಯಚೂರು, ಯಾದಗಿರಿ, ವಾಡಿ, ಕಲಬುರ್ಗಿ, ಕಮಲಾಪುರ, ಹುಮನಾಬಾದ್‌ ಮೂಲಕ ಮರುದಿನ ಬೆಳಿಗ್ಗೆ 7.30ಕ್ಕೆ ಬೀದರ್‌ನ ಖಾನಾಪುರ ಡೆಕ್ಕನ್‌ ರೈಲು ನಿಲ್ದಾಣ ತಲುಪಲಿದೆ.

ಬೀದರ್‌ನಿಂದ (82662) 26 ಹಾಗೂ 29ರಂದು ಸಂಜೆ 4ಕ್ಕೆ ಹೊರಟು ಮರುದಿನ ಬೆಳಿಗ್ಗೆ 8.40ಕ್ಕೆ ಯಲಹಂಕ ತಲುಪಲಿದೆ.

ಈ ರೈಲು ಒಂದು ಎ.ಸಿ. ತ್ರಿ ಟಯರ್‌, 10 ದ್ವಿತೀಯ ದರ್ಜೆ ಸ್ಲೀಪರ್‌ ಬೋಗಿಗಳು ಹಾಗೂ ಎರಡು ದ್ವಿತೀಯ ದರ್ಜೆ ಲಗೇಜ್‌ ಕಂ ಬ್ರೇಕ್‌ ವ್ಯಾನ್‌ ಹೊಂದಿರಲಿದೆ. ಬೇಡಿಕೆ ಹೆಚ್ಚಿದಂತೆ ಪ್ರಯಾಣ ದರವೂ ಹೆಚ್ಚಳವಾಗಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

Post Comments (+)