ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹಪೀಡಿತರಿಗೆ ನೆರವು: ಯಶವಂತಪುರ–ಮೀರಜ್‌ ನಡುವೆ ವಿಶೇಷ ರೈಲು

Last Updated 8 ಆಗಸ್ಟ್ 2019, 11:18 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಂಡು ತೊಂದರೆ ಅನುಭವಿಸುತ್ತಿರುವ ಜನರ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲು ಯಶವಂತಪುರ–ಮೀರಜ್ ನಡುವೆ ನಾಲ್ಕು ದಿನಗಳ ಮಟ್ಟಿಗೆ ‘ಜನಸಾಧಾರಣ ಎಕ್ಸ್‌ಪ್ರೆಸ್’(ಸಂಖ್ಯೆ 06583/06584) ವಿಶೇಷ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಆರಂಭಿಸಿದೆ.

ಆ.8ರಿಂದ 11ರವರೆಗೆ ಯಶವಂತಪುರದಿಂದ ರಾತ್ರಿ 11ಕ್ಕೆ ಹೊರಟು ಮರುದಿನ ಸಂಜೆ 6.35ಕ್ಕೆ ತಲುಪಲಿದೆ. ಆ.9ರಿಂದ 12ರವರೆಗೆ ಮೀರಜ್‌ನಿಂದ ರಾತ್ರಿ 9.20ಕ್ಕೆ ಹೊರಟು ಮರುದಿನ ಬೆಳಿಗ್ಗೆ 11ಕ್ಕೆ ಯಶವಂತಪುರ ತಲುಪಲಿದೆ.

ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಬೆಳಗಾವಿ, ಪಾಚ್ಚಾಪುರ, ಗೋಕಾಕ ರಸ್ತೆ, ಘಟಪ್ರಭಾ, ಚಿಕ್ಕೋಡಿ ರಸ್ತೆ, ರಾಯಘಡ, ಚಿಂಚೋಳಿ, ಕುಡಚಿ, ಉಗಾರ ಖುರ್ದ, ವಿಜಯನಗರದಲ್ಲಿ ನಿಲುಗಡೆಗೆ ಅವಕಾಶ ಇದೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT