ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ: ಬೆಂಗಳೂರು–ಬೀದರ್‌ ಮಧ್ಯೆ ವಿಶೇಷ ರೈಲು

Last Updated 1 ಅಕ್ಟೋಬರ್ 2019, 19:59 IST
ಅಕ್ಷರ ಗಾತ್ರ

ಕಲಬುರ್ಗಿ: ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯು ಬೆಂಗಳೂರಿನ ಯಲಹಂಕದಿಂದ ಬೀದರ್‌ಗೆ ಅಕ್ಟೋಬರ್‌ 4 ಹಾಗೂ 7ರಂದು ಎರಡು ಟ್ರಿಪ್‌ ವಿಶೇಷ ರೈಲನ್ನು (ಬೀದರ್‌–ಯಶವಂತಪುರ ಸುವಿಧಾ 82661–82662) ಓಡಿಸಲಿದೆ.

ಬೀದರ್‌ನಿಂದ ಯಲಹಂಕಕ್ಕೆ ಅ. 5 ಮತ್ತು 8ರಂದು ಈ ವಿಶೇಷ ರೈಲು ಹೊರಡಲಿದೆ.

ಅ 4ರಂದು ಸಂಜೆ 5ಕ್ಕೆ ಯಲಹಂಕದಿಂದ ಹೊರಟು ರಾಯಚೂರು, ಯಾದಗಿರಿ, ವಾಡಿ, ಕಲಬುರ್ಗಿ, ಹುಮನಾಬಾದ್‌ ಮಾರ್ಗವಾಗಿ ಅ 5ರಂದು ಬೆಳಿಗ್ಗೆ 8.30ಕ್ಕೆ ಬೀದರ್‌ ತಲುಪಲಿದೆ.

ಬೀದರ್‌ನಿಂದ ಅ 5ರಂದು ಸಂಜೆ 4ಕ್ಕೆ ಬೀದರ್‌ನಿಂದ ಹೊರಡುವ ರೈಲು ಮರುದಿನ ಬೆಳಿಗ್ಗೆ 8.40ಕ್ಕೆ ಯಲಹಂಕ ತಲುಪಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

3 ಎಸಿ ದರ್ಜೆಯ ದರ ಪ್ರತಿ ಪ್ರಯಾಣಿಕರಿಗೆ ₹ 2,510 ಇದ್ದು, ಸೆಕಂಡ್ ಕ್ಲಾಸ್‌ ಸ್ಲೀಪರ್‌ ದರ ₹ 1,100 ಇರುತ್ತದೆ. ಬೇಡಿಕೆಗೆ ತಕ್ಕಂತೆ ದರ ಹೆಚ್ಚಳವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT