ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಪ್ರವಾಸದಲ್ಲಿದ್ದ ಜೆಡಿಎಸ್‌ನ 7 ಕಾರ್ಯಕರ್ತರು ಕಾಣೆಯಾಗಿದ್ದಾರೆ: ಸಿಎಂ

ಉಗ್ರರ ಕೃತ್ಯಕ್ಕೆ ಗಣ್ಯರಿಂದ ಖಂಡನೆ
Last Updated 22 ಏಪ್ರಿಲ್ 2019, 6:22 IST
ಅಕ್ಷರ ಗಾತ್ರ

ಬೆಂಗಳೂರು:‘ಕೊಲಂಬೊದಲ್ಲಿ ಪ್ರವಾಸದಲ್ಲಿದ್ದ ರಾಜ್ಯದ ಜೆಡಿಎಸ್‌ನ ಏಳು ಮಂದಿಯ ತಂಡ ಬಾಂಬ್ ಸ್ಫೋಟದ ನಂತರ ಕಾಣೆಯಾಗಿದ್ದಾರೆ. ಇದನ್ನು ಕೇಳಿ ನನಗೆ ಇನ್ನಿಲ್ಲದ ಆಘಾತ ಹಾಗೂ ನೋವಾಗಿದೆ. ಈ ಪೈಕಿ ಇಬ್ಬರು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಕಳೆದು ಹೋಗಿರುವವರ ಪತ್ತೆ ಹಚ್ಚಲು ನಾನು ಭಾರತ ರಾಯಭಾರ ಕಚೇರಿಯೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಈಸ್ಟರ್ ಆಚರಣೆಯ ಸಂಭ್ರಮ ದಿನವಾದ ಭಾನುವಾರಶ್ರೀಲಂಕಾದಲ್ಲಿ ಉಗ್ರರು ಸಂಘಟಿಸಿದ ಸರಣಿ ಸ್ಫೋಟದ ವೇಳೆ ಭಾರತದ ಐವರು ಸೇರಿ290 ಹೆಚ್ಚು ಮಂದಿ ಮೃತಪಟ್ಟಿದ್ದರು.ಈ ಕೃತ್ಯವನ್ನು ವಿಶ್ವದ ಪ್ರಮುಖ ನಾಯಕರು ಖಂಡಿಸಿದ್ದಾರೆ.

‘ಶ್ರೀಲಂಕಾದಲ್ಲಿ ಸಂಭವಿಸಿದಭೀಕರ ಸ್ಫೋಟ ಪ್ರಕರಣಗಳನ್ನು ತೀವ್ರವಾಗಿ ಖಂಡಿಸುತ್ತೇನೆ. ನಮ್ಮ ಪ್ರದೇಶದಲ್ಲಿ ಇಂತಹ ದೌರ್ಜನ್ಯಕ್ಕೆ ಅವಕಾಶವಿಲ್ಲ. ಭಾರತವು ಶ್ರೀಲಂಕಾದ ಜನರೊಂಟ್ಟಿಗೆ ನಿಲ್ಲಲಿದೆ. ಗಾಯಗೊಂಡವರು ಹಾಗೂ ಮೃತಪಟ್ಟವರ ಕುಟುಂಬದವರಿಗಾಗಿ ಪ್ರಾರ್ಥಿಸುತ್ತೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

‘ಶ್ರೀಲಂಕಾದಲ್ಲಿನ ಚರ್ಚ್ಮತ್ತು ಹೋಟೆಲ್‍ಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ 138 ಮಂದಿ ಸಾವಿಗೀಡಾಗಿದ್ದು, 600ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಶ್ರೀಲಂಕಾದ ಜನರಿಗಾಗಿ ಅಮೆರಿಕವು ಸಂತಾಪ ಸೂಚಿಸುತ್ತಿದೆ. ನಾವು ನಿಮ್ಮ ಸಹಾಯಕ್ಕೆ ಸಿದ್ಧರಾಗಿದ್ದೇವೆ’ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಟ್ವೀಟಿಸಿದ್ದರು.

ಶ್ರೀಲಂಕಾ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರು ಇದೊಂದು‘ಹೇಡಿಗಳ ಕೃತ್ಯ’ ಎಂದು ಕಿಡಿಕಾರಿದ್ದಾರೆ. ‘ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.ಈ ದುರಂತದ ಸಮಯದಲ್ಲಿ ಶ್ರೀಲಂಕಾ ಜನತೆ ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಇದೊಂದು‘ಹೇಯ ಕೃತ್ಯ’ ಎಂದು ಬರೆದುಕೊಂಡಿದ್ದು, ಪ್ರಕರಣವನ್ನು ಖಂಡಿಸಿದ್ದಾರೆ.

ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ,‘ಪವಿತ್ರ ದಿನದಂದು ಇಂತಹ ಸರಣಿ ಸ್ಫೋಟ ನಡೆದಿವುದು ಖಂಡನೀಯ. ದಾಳಿ ಹಿಂದೆ ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ಎಂದುಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT