ಬುಧವಾರ, ಆಗಸ್ಟ್ 21, 2019
28 °C

ಮಂತ್ರಾಲಯ: ವಿಜೃಂಭಣೆಯಿಂದ ರಾಯರ ಪೂರ್ವಾರಾಧನೆ

Published:
Updated:

ರಾಯಚೂರು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಆರಂಭವಾಗಿದ್ದು ಶುಕ್ರವಾರ ಪೂರ್ವಾರಾಧನೆ ನಡೆಯುತ್ತಿದೆ. 

ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಮಠದ ಪ್ರಾಕಾರದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ನಡೆಯಿತು.

ನಾಡಿನ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದು ತುಂಗಾನದಿ ಪುಣ್ಯಸ್ನಾನ ಮಾಡಿಕೊಂಡು ರಾಯರ ದರ್ಶನ ಪಡೆಯುತ್ತಿದ್ದಾರೆ. ಶುಕ್ರವಾರ ಸಂಜೆ ಅನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

ಶನಿವಾರ ಮಧ್ಯಾರಾಧನೆ ನಡೆಯಲಿದ್ದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಸೇರಿದಂತೆ ಅನೇಕ ಮಹನೀಯರು ಮಧ್ಯಾರಾಧನೆ ವಿಶೇಷ ಸಂದರ್ಭದಲ್ಲಿ ರಾಯರ ದರ್ಶನಕ್ಕೆ ಬರಲಿದ್ದಾರೆ.

Post Comments (+)