ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಮಾರ್ಚ್‌ 20ರಿಂದ‌ ಪರೀಕ್ಷೆ ಆರಂಭ

Last Updated 19 ಅಕ್ಟೋಬರ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (ಕೆಎಸ್‌ಇಇಬಿ) ಎಸ್ಸೆಸ್ಸೆಲ್ಸಿ ಪರೀಕ್ಷೆ
ಯನ್ನು 2020ರ ಮಾರ್ಚ್‌ 20ರಿಂದ ಏಪ್ರಿಲ್‌ 3ರ ನಡುವೆ ನಡೆಸಲು ನಿರ್ಧರಿಸಿದ್ದು, ಆಕ್ಷೇಪಣೆ ಇದ್ದರೆ ನವೆಂಬರ್‌ 19ರೊಳಗೆ ಮಲ್ಲೇಶ್ವರ 6ನೇ ಅಡ್ಡರಸ್ತೆಯಲ್ಲಿರುವಕಚೇರಿಗೆ ಅಂಚೆ ಮೂಲಕ ಸಲ್ಲಿಸಲು ತಿಳಿಸಲಾಗಿದೆ.

ವೇಳಾಪಟ್ಟಿಯಂತೆ ಮಾರ್ಚ್‌ 20 ರಂದು ಪ್ರಥಮ ಭಾಷೆ, 21ರಂದು ಅರ್ಥಶಾಸ್ತ್ರ, ಇತರ ಕೋರ್‌ ವಿಷಯ
ಗಳು,23ರಂದು ಸಮಾಜ ವಿಜ್ಞಾನ, 26ರಂದು ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ, 30ರಂದು ಗಣಿತ, ಏಪ್ರಿಲ್‌ 1ರಂದು ದ್ವಿತೀಯ ಭಾಷೆ, 3ರಂದು ತೃತೀಯ ಭಾಷೆ, ಎನ್‌ಎಸ್‌ಕ್ಯೂಎಫ್‌ ಪರೀಕ್ಷೆಗಳು ನಡೆಯಲಿವೆ.

ಪ್ರಥಮ ಭಾಷೆಗೆ ಗರಿಷ್ಠ 100 ಅಂಕ, ಉಳಿದ ವಿಷಯಗಳಿಗೆ ಗರಿಷ್ಠ 80 ಅಂಕಗಳಂತೆ ಪರೀಕ್ಷೆ ನಡೆಯಲಿದೆ. ಆದರೆ ಸಿಸಿಇ ಖಾಸಗಿ, ಪುನರಾವರ್ತಿತ ಮತ್ತಿತರ ಅಭ್ಯರ್ಥಿಗಳಿಗೆ ಮಾತ್ರ ಪ್ರಥಮ ಭಾಷೆಗೆ 125, ಇತರ ವಿಷಯಗಳಿಗೆ 100 ಅಂಕಗಳಂತೆ ಪರೀಕ್ಷೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT