ಶುಕ್ರವಾರ, ಡಿಸೆಂಬರ್ 6, 2019
21 °C
ಮಂಡಳಿಯಿಂದಲೇ ಪ್ರಶ್ನೆಪತ್ರಿಕೆ– ಇತರ ಪರೀಕ್ಷೆಗಳಿಗೆ ತಡೆ

ಫೆ.17ರಿಂದ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಸ್ಸೆಸ್ಸೆಲ್ಸಿ ಮಂಡಳಿಯ ವತಿಯಿಂದಲೇ ಈ ಬಾರಿ ಪೂರ್ವಸಿದ್ಧತಾ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ದಂಧೆಗೆ ಕಡಿವಾಣ ಬೀಳಲಿದೆ.

ಇದುವರೆಗೆ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯುತ್ತಿದ್ದವು. ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಡೆಯುವುದು, ಮೇಲಿಂದ ಮೇಲೆ ಪರೀಕ್ಷೆ ನಡೆಸುತ್ತ ಅವರ ಕಲಿಕೆಗೆ ಸಮಯ ಕೊಡದೆ ಇರುವ ಪರಿಸ್ಥಿತಿ ಇತ್ತು. ಇದೆಲ್ಲದಕ್ಕೂ ಉತ್ತರ ಎಂಬಂತೆ ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ಅವರು ಕೇಂದ್ರೀಕೃತ ಪೂರ್ವಸಿದ್ಧತಾ ಪರೀಕ್ಷಾ ಕ್ರಮವನ್ನು
ಈ ಬಾರಿಯಿಂದ ಜಾರಿಗೆ ತಂದಿದ್ದಾರೆ.

ಅದರಂತೆ ಫೆ.17ರಿಂದ 24ರವರೆಗೆ ಪರೀಕ್ಷೆಗಳು ನಡೆಯಲಿವೆ. ಮಂಡಳಿಯೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಜಿಲ್ಲೆಗಳಿಗೆ ರವಾನಿಸಲಿದೆ. ‌

ಶುಲ್ಕ ವಿನಾಯಿತಿ ಪಡೆದ ವಿದ್ಯಾರ್ಥಿಗಳ ಹೊರತಾಗಿ ಉಳಿದವರಿಗೆ ತಲಾ ₹ 25ರಂತೆ ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕವನ್ನು ಡಿ. 31ರೊಳಗೆ ಮಂಡಳಿಗೆ ನೆಫ್ಟ್‌ ಮೂಲಕ ಕಳಿಸಬೇಕು ಎಂದು ಶನಿವಾರ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು