ಶನಿವಾರ, ಡಿಸೆಂಬರ್ 14, 2019
21 °C

ಯಡಿಯೂರಪ್ಪ ಬಹುಮತ ಸಾಬೀತುಪಡಿಸುವುದು ನಿಶ್ಚಿತ: ಪ್ರಹ್ಲಾದ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ‌ಯಡಿಯೂರಪ್ಪ ಅವರು ಸೋಮವಾರ ಬಹುಮತ ಸಾಬೀತುಪಡಿಸುವುದು ನಿಶ್ಚಿತ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. 

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪನವರ ರೈತ ಪರ ಹೋರಾಟ ಪ್ರಶ್ನಾತೀತ. ಮೊದಲ ಸಂಪುಟ ಸಭೆಯಲ್ಲೇ ರೈತ ಪರ ನಿಲುವು ಕೈಗೊಳ್ಳುವ ಮೂಲಕ ಸರ್ಕಾರದ ಆದ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ’ ಎಂದರು. 

ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ ಜತೆ ಚರ್ಚಿಸಿದ ‌ಬಳಿಕ ಅಂತಿಮವಾಗಲಿದೆ ಎಂದು ತಿಳಿಸಿದರು. 

ಇದನ್ನೂ ಓದಿ... ಮಂಡ್ಯ | ಹುಟ್ಟೂರು ಬೂಕನಕೆರೆಗೆ ತೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ

ಯಾವುದೇ ಪಕ್ಷದ‌ ಬೆಂಬಲವಿಲ್ಲದೆ ‘ವಿಶ್ವಾಸಮತ’ 
‘ಮುಖ್ಯಮಂತ್ರಿ ಯಡಿಯೂರಪ್ಪ ‌ನೂರಕ್ಕೆ‌ ನೂರರಷ್ಟು ‌ಬಹುಮತ ಸಾಬೀತುಪಡಿಸಲಿದ್ದಾರೆ. ಬೇರೆ ಯಾವುದೇ ಪಕ್ಷದ‌ ಬೆಂಬಲವಿಲ್ಲದೆ‌ ನಾವು ವಿಶ್ವಾಸಮತದಲ್ಲಿ ಗೆಲುವು ಸಾಧಿಸಲಿದ್ದೇವೆ. ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ನೀಡುವ ವಿಚಾರದಲ್ಲಿ ಪ್ರಸ್ತಾವನೆ ಬಂದರೆ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡಲಿದೆ’ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ. 

* ಇವನ್ನೂ ಓದಿ...

ಬಿಜೆಪಿ ಸರ್ಕಾರ ರಚನೆಗೆ ರಾತ್ರೋ ರಾತ್ರಿ ಶಾ ಒಪ್ಪಿದ್ದು ಏಕೆ?

ಹೋರಾಟದ ಮೂಸೆಯಲ್ಲಿ ರೂಪುಗೊಂಡ ಯಡಿಯೂರಪ್ಪ

ಯಡಿಯೂರಪ್ಪ ಮುಖ್ಯಮಂತ್ರಿ; ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ

ಇನ್ನು ಮುಂದೆ ಅಭಿವೃದ್ಧಿ ಪರ್ವ: ಬಿಎಸ್‌ವೈ ಭರವಸೆ

ಬಿಜೆಪಿಗೆ ಬಾಹ್ಯ ಬೆಂಬಲ ನೀಡಲು ಜೆಡಿಎಸ್‌ ಶಾಸಕರ ಒಲವು?​

ಪ್ರತಿ ರೈತನಿಗೂ ಕೇಂದ್ರದ ₹6,000+ರಾಜ್ಯದ ₹4,000= ₹10 ಸಾವಿರ: ಯಡಿಯೂರಪ್ಪ ಘೋಷಣೆ​

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು