ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಕಡೆ ಮನ ಸೆಳೆಯುವ ‘ಸಖಿ ಪಿಂಕ್ ಬೂತ್’

ಚುನಾವಣಾ ಆಯೋಗದಿಂದ ವಿನೂತನ ಕ್ರಮ
Last Updated 12 ಮೇ 2018, 5:27 IST
ಅಕ್ಷರ ಗಾತ್ರ

ಕಲಬುರ್ಗಿ: ಮಹಿಳೆಯರನ್ನು ಮತಗಟ್ಟೆ ಕಡೆಗೆ ಆಕರ್ಷಿಸಲು ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ‘ಸಖಿ ಪಿಂಕ್ ಬೂತ್’ ಸ್ಥಾಪಿಸಲಾಗಿದೆ.

ಮಹಿಳಾ ಮತದಾರರು ಹೆಚ್ಚಾಗಿರುವ ಕಡೆ ಈ ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಇದು ಸಂಪೂರ್ಣ ಮಹಿಳೆಯರಿಂದಲೇ ನಿರ್ವಹಿಸುವ ಮತದಾನ ಕೇಂದ್ರವಾಗಿದೆ.

ಮತಗಟ್ಟೆ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಕೂಡ ಮಹಿಳೆಯರೇ ಇರುತ್ತಾರೆ. ಇಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲರೂ ಪಿಂಕ್ (ಗುಲಾಬಿ) ಬಣ್ಣದ ಸಮವಸ್ತ್ರಗಳನ್ನು ಧರಿಸಿರುತ್ತಾರೆ.ಈ ಮತಗಟ್ಟೆಯಲ್ಲಿ ಮಹಿಳೆಯರಿಗೆ ಇಷ್ಟವಾಗುವ ಪಿಂಕ್ ಬಣ್ಣವನ್ನು ಬಳಸಲಾಗಿದೆ.

ಮತದಾನ ಕೇಂದ್ರದ ಬಾಗಿಲು, ಚೌಕಟ್ಟು, ಕಿಟಕಿ, ಮೇಜು, ಕುರ್ಚಿ– ಹೀಗೆ ಎಲ್ಲವೂ ಪಿಂಕ್ ಬಣ್ಣದಿಂದ ಕೂಡಿವೆ. ಮತದಾನ ಕೇಂದ್ರದ ಗೋಡೆಗಳನ್ನು ಪಿಂಕ್ ಬಲೂನುಗಳಿಂದ ಅಲಂಕರಿಸಲಾಗಿದೆ. ಈ ಕೇಂದ್ರಗಳಲ್ಲಿ ಮಹಿಳೆಯರ ಜತೆ ಪುರುಷರೂ ಮತದಾನ ಮಾಡಬಹುದಾಗಿದೆ.ಪಿಂಕ್ ಮತಗಟ್ಟೆ ಸ್ಥಾಪನೆಗೆ ತಲಾ ₹10 ಸಾವಿರ ವೆಚ್ಚಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT