ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಗರಿಗೆದರಿದ ಮತಯಾಚನೆ

Last Updated 29 ಏಪ್ರಿಲ್ 2018, 5:36 IST
ಅಕ್ಷರ ಗಾತ್ರ

ಸಂಡೂರು: ಕ್ಷೇತ್ರದ ಎಸ್‌ಯುಸಿಐ ಪಕ್ಷದ ಅಭ್ಯರ್ಥಿ ಎ. ರಾಮಾಂಜನಪ್ಪ ಅವರು ಶನಿವಾರ ತಾಲ್ಲೂಕಿನ ಸುಲ್ತಾನಾಪುರ, ಕೋಡಾಲು, ತುಮಟಿ, ಚಿಕ್ಕಂತಾಪುರ, ಡಿ. ಅಂತಾಪುರದಲ್ಲಿ ಮತಯಾಚಿಸಿದರು.

ಚಿಕ್ಕಂತಾಪುರ ಗ್ರಾಮದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಎ. ರಾಮಾಂಜನಪ್ಪ, ‘ಬೃಹದಾಕಾರವಾಗಿ ಬೆಳೆದಿರುವ ಪಕ್ಷಗಳು ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿವೆ. ಹಲವರಿಗೆ ರಾಜಕೀಯ ಹಣ ಮಾಡಿಕೊಳ್ಳುವ ದಂಧೆಯಾಗಿದೆ. ಇಂತಹ ಮುಖಂಡರಿಂದ ಏನನ್ನೂ ನಿರೀಕ್ಷಿಸಲಾಗದು. ಜೆಸಿಬಿ (ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ) ಅಕ್ರಮ ಗಣಿಗಾರಿಕೆಯ ಕೂಸುಗಳಾಗಿವೆ’ ಎಂದು ದೂರಿದರು.ಪಕ್ಷದ ಜಿಲ್ಲಾ ಸಮಿತಿ ಮುಖಂಡ ಸೋಮಶೇಖರಗೌಡ ಮಾತನಾಡಿದರು.

ಜೆಡಿಎಸ್‌ ಪ್ರಚಾರ

ತೋರಣಗಲ್ಲು: ಸಮೀಪದ ಕುಡಿತಿನಿ ಮತ್ತು ವೇಣಿವೀರಾಪುರ ಗ್ರಾಮದಲ್ಲಿ ಶನಿವಾರ ಸಂಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಬಿ.ವಸಂತಕುಮಾರ ಮತಯಾಚಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಪ್ಪ ಮಾತನಾಡಿ, ‘10 ವರ್ಷ ಕಾಲ ಕಾಂಗ್ರೆಸ್‌ ಆಡಳಿತವಿದ್ದರೂ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ’ ಎಂದು ದೂರಿದರು. ಮುಖಂಡರಾದ ಎನ್.ಸೋಮಪ್ಪ, ನಾಗಲಿಂಗ, ಡಿ.ಶೇಷಪ್ಪ. ಶಿವಣ್ಣ, ಅಂಬಣ್ಣ, ಪಂಪಾಪತಿ ಇದ್ದರು.

ಮತಕ್ಕಾಗಿ ವಕೀಲರಿಗೆ ಮನವಿ

ಬಳ್ಳಾರಿ: ನಗರದ 35ನೇ ವಾರ್ಡ್‌ನ ವಿವಿಧ ಬಡಾವಣೆಗಳಲ್ಲಿ ಶನಿವಾರ ಬಿಜೆಪಿ ನಗರ ಕ್ಷೇತ್ರದ ಅಭ್ಯರ್ಥಿ ಜಿ.ಸೋಮಶೇಖರ ರೆಡ್ಡಿ ಮತಯಾಚಿಸಿದರು. ವಾರ್ಡನ ಶಾಸ್ತ್ರಿನಗರ, ಬ್ಯಾಂಕ್ ಕಾಲೊನಿ ಹಾಗೂ ವಕೀಲರ ಸಂಘದ ಆವರಣದಲ್ಲಿ ಪ್ರಚಾರ ಮಾಡಿದರು.

ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬದರಿನಾಥ್ ಹಾಗೂ‌ ಕಾರ್ಯದರ್ಶಿ ರವಿ ರಾಜಶೇಖರರೆಡ್ಡಿ, ನಗರದ ಸಮಸ್ಯೆಗಳ ಕುರಿತು ರೆಡ್ಡಿಯವರ ಗಮನ ಸೆಳೆದರು.

ಜೆ.ಶಾಂತಾ, ಶ್ರೀನಿವಾಸ್ ಮೋತ್ಕರ್, ಮಲ್ಲನಗೌಡ, ವೀರಶೇಖರರೆಡ್ಡಿ, ಶಶಿಕಲಾ, ಸುಮಾರೆಡ್ಡಿ, ಕೃಷ್ಣಾರೆಡ್ಡಿ, ರಾಜಶೇಖರ್, ಭೀಮಣ್ಣ ಇದ್ದರು.

ಹೊತುರ್ ಪ್ರಚಾರ

ಬಳ್ಳಾರಿ: ನಗರದ 5ನೇ ವಾರ್ಡ್‌ನ ವಿವಿಧ ಪ್ರದೇಶಗಳಲ್ಲಿ ಶನಿವಾರ ಸಂಚರಿಸಿದ ಜೆಡಿಎಸ್ ನಗರ ಅಭ್ಯರ್ಥಿ ಮೊಹ್ಮದ್ ಇಕ್ಬಾಲ್ ಹೊತುರ್ ಮತಯಾಚಿಸಿದರು.

ವಾರ್ಡ್‌ನ ಎಪಿಎಂಸಿ ಮಾರುಕಟ್ಟೆ, ಕಾಗರ್ಲ ತೋಟ, ಮುಂಡ್ರಗಿ ಪ್ರದೇಶದಲ್ಲಿ ಪ್ರಚಾರ ಮಾಡಿದರು. ಇದೇ ವೇಳೆಯಲ್ಲಿ ಅವರಿಗೆ ಜನರು ಮೂಲ ಸೌಕರ್ಯಗಳ ಕುರಿತು ಅಹವಾಲು ಸಲ್ಲಿಸಿದರು.

ಮುಖಂಡರಾದ ಅಮರೇಶ್, ಕಿರಣ್, ಆಸೀಫ್, ವಿಜಯ್ ಕುಮಾರ್, ಕೆ.ಪಂಪಾಪತಿ, ಗೋಪಾಲ್.ವೈ, ಪರಶುರಾಮ್, ಎಚ್.ಎಂ ಕಿರಣ್ ಕುಮಾರ್, ಶಾಂತ್ ಕುಮಾರ್ ಇದ್ದರು.

ಅಕ್ರಮ ಮದ್ಯ ವಶ

ಹೂವಿನಹಡಗಲಿ: ತಾಲ್ಲೂಕಿನ ಲಿಂಗನಾಯಕನಹಳ್ಳಿ ತಾಂಡಾ ಮತ್ತು ನಡುವಿನ ತಾಂಡಾದಲ್ಲಿ ಶುಕ್ರವಾರ ಅಬಕಾರಿ ನಿರೀಕ್ಷಕಿ ಸೀಮಾ ಮರಿಯಾ ಸುವಾರಿಸ್‌ ನೇತೃತ್ವದ ಅಬಕಾರಿ ಪೊಲೀಸರ ತಂಡ ದಾಳಿ ನಡೆಸಿ ₹1,358 ಮೌಲ್ಯದ ಮದ್ಯ ವಶಕ್ಕೆ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT