ಗಮನ ಬೇರೆಡೆ ಸೆಳೆದು ಲ್ಯಾಪ್‌ಟಾಪ್, ಮೊಬೈಲ್ ಇದ್ದ ಬ್ಯಾಗ್ ದೋಚಿದ ಖದೀಮರು

7

ಗಮನ ಬೇರೆಡೆ ಸೆಳೆದು ಲ್ಯಾಪ್‌ಟಾಪ್, ಮೊಬೈಲ್ ಇದ್ದ ಬ್ಯಾಗ್ ದೋಚಿದ ಖದೀಮರು

Published:
Updated:

ಬೆಂಗಳೂರು: ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ವಿದ್ಯಾರ್ಥಿನಿಯ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು, ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಇದ್ದ ಬ್ಯಾಗ್ ದೋಚಿ ಪರಾರಿಯಾಗಿದ್ದಾರೆ.

ನಾಗವಾರದ ‘ಸಾಯಿ’ ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ ನೆಲೆಸಿರುವ ವಿದ್ಯಾರ್ಥಿನಿ, ಕೇರಳಕ್ಕೆ ತೆರಳಲು ಕಲಾಸಿಪಾಳ್ಯ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಬ್ಯಾಗ್ ಕೆಳಗಿಟ್ಟು ನಿಂತುಕೊಂಡಿದ್ದಾಗ ಒಬ್ಬಾತ ಅವರನ್ನು ಮಾತಿಗೆ ಎಳೆದಿದ್ದಾನೆ. ಈ ಹಂತದಲ್ಲಿ ಇನ್ನೊಬ್ಬ ಹಿಂದಿನಿಂದ ಬಂದು ಬ್ಯಾಗ್ ತೆಗೆದುಕೊಂಡು ಹೊರಟು ಹೋಗಿದ್ದಾನೆ.

ಬ್ಯಾಗ್ ಕಳವಾಗಿರುವ ವಿಚಾರ ಸ್ವಲ್ಪ ಸಮಯದ ಬಳಿಕ ವಿದ್ಯಾರ್ಥಿನಿಯ ಗಮನಕ್ಕೆ ಬಂದಿದೆ. ನಂತರ ಸ್ನೇಹಿತೆಯನ್ನು ನಿಲ್ದಾಣಕ್ಕೆ ಕರೆಸಿಕೊಂಡ ಅವರು, ಕಲಾಸಿಪಾಳ್ಯ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾರೆ. ಬ್ಯಾಗ್ ದೋಚಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆ ಸುಳಿವು ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 3

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !