ಬಾಲಕನ ಕಣ್ಣಲ್ಲಿ ಕಲ್ಲಿನಾಕಾರದ ಹರಳು

7

ಬಾಲಕನ ಕಣ್ಣಲ್ಲಿ ಕಲ್ಲಿನಾಕಾರದ ಹರಳು

Published:
Updated:
Deccan Herald

ಹೊಸದುರ್ಗ: ತಾಲ್ಲೂಕಿನ ತಣಿಗೇಕಲ್ಲು ಗ್ರಾಮದ ಶಿಕ್ಷಕ ರೇವಣ ಸಿದ್ದಪ್ಪ ಹಾಗೂ ರೂಪಾ ಅವರ ಮಗ ಆರ್‌. ಮಿಥುನ್‌ ಕಣ್ಣಲ್ಲಿ 9 ದಿನಗಳಿಂದ ಹರಳು ಹೊರಬರುತ್ತಿದೆ.

4ನೇ ತರಗತಿ ಓದುತ್ತಿರುವ ಈತ 9 ದಿನಗಳ ಹಿಂದೆ ಶಾಲೆಯಿಂದ ಮನೆಗೆ ಹೋಗುತ್ತಿರುವ ಸಮಯದಲ್ಲಿ ಬಲಗಣ್ಣಿಗೆ ಏನೋ ಬಡಿದ ಅನುಭವವಾಗಿದೆ. ಅಂದಿನಿಂದ 5 ನಿಮಿಷಕ್ಕೊಮ್ಮೆ ಜೋಳದ ಕಾಳು ಗಾತ್ರದ ಹರಳು ಹೊರಬರುತ್ತಿವೆ. ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆ, ಶಿವಮೊಗ್ಗ, ಚಿತ್ರದುರ್ಗದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ಅಲರ್ಜಿ ಎಂದು ಕಣ್ಣಿನ ಡ್ರಾಪ್ಸ್‌ ಕೊಟ್ಟಿದ್ದಾರೆ. ಮತ್ತೊಬ್ಬ ವೈದ್ಯರು ಹೊಟ್ಟೆಯ ಅಲರ್ಜಿ ಎಂದು ಹೇಳಿ ಜಂತುಹುಳು ಮಾತ್ರೆ ಕೊಟ್ಟಿದ್ದಾರೆ. ಆದರೆ, ಹರಳು ಬರುತ್ತಿರುವುದು ನಿಂತಿಲ್ಲ.

‘ಅಪರೂಪದ ಪ್ರಕರಣ’

ಬಾಲಕನ ಕಣ್ಣಲ್ಲಿ ಹರಳು ಬರುತ್ತಿರುವುದು ಅಪರೂಪದ ಪ್ರಕರಣ. ವರ್ನಲ್‌ ಕೆರೊಟೋ ಕನ್‌ಜಂಕ್ಟವೈಟೀಸ್‌ ಕಾಬೋಲ್‌ ಸ್ಟೋನ್‌ ಡಿಸ್‌ಚಾರ್ಜ್‌ ಅಥವಾ ಡ್ಯಾಕ್ರೋ ಲಿಕ್ಯಾಸಿಸ್‌, ಅಲರ್ಜಿ, ನಂಜು, ಟಿಬಿ ನಂಜಿನಿಂದ ಈ ರೀತಿ ಆಗುತ್ತಿರಬಹುದು ಎಂದು ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಯೋಗೀಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !