ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ

7

ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ

Published:
Updated:
Deccan Herald

ಹೊನ್ನಾಳಿ: ತಾಲ್ಲೂಕಿನ ಚನ್ನಮುಂಭಾಪುರ ಗ್ರಾಮದಲ್ಲಿ ಎರಡು ಬೀದಿ ನಾಯಿಗಳು ನಾಲ್ಕೂವರೆ ವರ್ಷದ ಬಾಲಕ ನರೇಂದ್ರನ ಮೇಲೆ ದಾಳಿ ನಡೆಸಿ ಆತನ ಗಲ್ಲ ಕಚ್ಚಿ ತಿಂದಿವೆ.

‘ಗುರುವಾರ ಸಂಜೆ ಮನೆಯ ಮುಂಭಾಗದ ರಸ್ತೆಯಲ್ಲಿ ನಿಂತಿದ್ದ ನರೇಂದ್ರನ ಮೇಲೆ ಎರಡು ಬೀದಿ ನಾಯಿಗಳು ದಾಳಿ ನಡೆಸಿ ಆತನ ಗಲ್ಲ ಕಚ್ಚಿ ತಿಂದಿವೆ. ಓಡಿ ಬರುವಷ್ಟರಲ್ಲಿ ನಾಯಿಗಳು ಪರಾರಿಯಾದವು. ತಕ್ಷಣವೇ ಹೊನ್ನಾಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಯಿತು’ ಎಂದು ತಂದೆ ರಾಜಪ್ಪ ತಿಳಿಸಿದರು.

ನಾಯಿ ಹಿಡಿಸಲು ಕ್ರಮ ಕೈಗೊಳ್ಳುವಂತೆ ಸೋಮವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !