ಸೋಮವಾರ, ಆಗಸ್ಟ್ 26, 2019
22 °C

ಅಂಬುಲೆನ್ಸ್‌ಗೆ ದಾರಿ ತೋರಿದ ವಿದ್ಯಾರ್ಥಿಗೆ ಶೌರ್ಯ ಪ್ರಶಸ್ತಿ

Published:
Updated:
Prajavani

ರಾಯಚೂರು: ಕೃಷ್ಣಾನದಿ ಪ್ರವಾಹದಿಂದ ಮುಳುಗಿದ್ದ ಸೇತುವೆ ಮೇಲೆ ಅಂಬ್ಯುಲೆನ್ಸ್‌ ಸಂಚರಿಸುವುದಕ್ಕೆ ಸರಿಯಾದ ಮಾರ್ಗ ತೋರಿಸಿ ಸಾಹಸ ಮೆರೆದ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹಿರೇರಾಯನಕುಂಪಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ವೆಂಕಟೇಶನಿಗೆ ಜಿಲ್ಲಾಧಿಕಾರಿ ಶರತ್‌ ಬಿ. ಅವರು ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿ ನೀಡಿ ಗುರುವಾರ ಸನ್ಮಾನಿಸಿದರು.

ಇದನ್ನೂ ಓದಿ: ಆ್ಯಂಬುಲೆನ್ಸ್ ಮುಂದೆ ಓಡಿ ಸಹಾಯ ಮಾಡಿದ 

ಮಹಿಳೆಯೊಬ್ಬರ ಮೃತದೇಹ ತೆಗೆದುಕೊಂಡು ಬಂದಿದ್ದ ಅಂಬ್ಯುಲೆನ್ಸ್‌ ಹಿರೇರಾಯಕುಂಪಿ ಬಳಿಯ ಸೇತುವೆ ದಾಟಿಕೊಂಡು ಯಾದಗಿರಿ ಜಿಲ್ಲೆಯ ಮಾಚನೂರು ಗ್ರಾಮಕ್ಕೆ ತಲುಪಬೇಕಿತ್ತು. ಆದರೆ, ಸೇತುವೆಯು ಜಲಾವೃತವಾಗಿದ್ದನ್ನು ನೋಡಿ ಮಾರ್ಗ ಕಾಣದೆ ಅಂಬ್ಯುಲೆನ್ಸ್‌ ನಿಂತುಕೊಂಡಿತ್ತು. ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ವೆಂಕಟೇಶ ಕೂಡಲೇ ಸೇತುವೆ ಮಾರ್ಗದುದ್ದಕ್ಕೂ ನೀರಿನಲ್ಲಿ ನಡೆಯುತ್ತಾ ಹೋಗಿ, ಅಂಬ್ಯುಲೆನ್ಸ್‌ ಸಂಚರಿಸಿ ಮುಂದೆ ಹೋಗುವುದಕ್ಕೆ ನೆರವಾಗಿದ್ದ.

ಇದರ ವಿಡಿಯೋ ದೃಶ್ಯಾವಳಿಯ ತುಣುಕೊಂದು ವ್ಯಾಟ್ಸ್‌ಅ್ಯಪ್‌ನಲ್ಲಿ ವೈರಲ್‌ ಆಗಿತ್ತು. ಬಾಲಕನ ಸಾಹಸವನ್ನು ಜನರು ಮೆಚ್ಚಿಕೊಂಡಿದ್ದರು. ಇದೀಗ ಬಾಲಕನಿಗೆ ಶೌರ್ಯ ಪ್ರಶಸ್ತಿ ನೀಡುವಂತೆ ಜಿಲ್ಲಾಡಳಿತವು ಶಿಫಾರಸು ಮಾಡಬೇಕು ಎಂದು ಜನರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಎಲ್ಲ ಬಟ್ಟೆಗಳನ್ನು ಸಂತ್ರಸ್ತರಿಗೆ ನೀಡಿದ ನೌಷಾದ್

Post Comments (+)