ಮಂಗಳವಾರ, ನವೆಂಬರ್ 12, 2019
19 °C

ಉಪಜಾತಿಗಳಲ್ಲಿ ವಿವಾಹ ಸಂಬಂಧ ಬೆಳೆಯಲಿ: ಶಾಮನೂರು ಶಿವಶಂಕರಪ್ಪ

Published:
Updated:

ಬೆಂಗಳೂರು: ‘ವೀರಶೈವ ಉಪಜಾತಿಗಳಲ್ಲಿ ವಿವಾಹ ಸಂಬಂಧಗಳು ಹೆಚ್ಚಿದರೆ ಸಮುದಾಯ ಸಬಲವಾಗುತ್ತದೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು. 

ಮಹಾಸಭಾದ ವತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೀರಶೈವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕದಲ್ಲಿ ವೀರಶೈವ ಸಮುದಾಯದ ಉಪಜಾತಿಗಳಲ್ಲಿ ವಿವಾಹ ಸಂಬಂಧಗಳು ಬೆಳೆಸಲು ಕೆಲವು ಸಮಸ್ಯೆಗಳಿವೆ’ ಎಂದರು. 

‘ವೀರಶೈವ ಸಮುದಾಯದಲ್ಲಿ ಉಪಜಾತಿಗಳ ಬಗೆಗಿನ ತಾರತಮ್ಯ ನಿಲ್ಲಬೇಕು. ನಮ್ಮ ಸಮುದಾಯ ಸಬಲವಾದರೆ, ಯಾರಿಂದಲೂ ವಿಭಜಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)