ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ರಹ್ಮಣ್ಯ ಸ್ವಾಮೀಜಿ ಉಪವಾಸ

ಮಠ; ಗೋಶಾಲೆಗೆ ಬರುತ್ತಿದ್ದ ನೀರು ಬಂದ್‌ ಪ್ರಕರಣ
Last Updated 13 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ‘ಶ್ರೀಮಠದ ವಿರುದ್ಧ ಕೆಲವು ಸಮಯದಿಂದ ಕೆಲವರು ನಿರಂತರ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು, ಮಠ ಹಾಗೂ ಗೋಶಾಲೆಯ ಹಸುಗಳಿಗೆ ಸರಬರಾಜಾಗುತ್ತಿದ್ದ ನೀರು ಸ್ಥಗಿತಗೊಳಿಸಿರುವುದು ನನ್ನ ಮನಸ್ಸಿಗೆ ಅತೀವ ನೋವುಂಟು ಮಾಡಿದೆ. ಇದರಿಂದ ಬೇಸತ್ತು ಉಪವಾಸ ಆರಂಭಿಸಿದ್ದೇನೆ’ ಎಂದು ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ಶ್ರೀಗಳು ತಿಳಿಸಿದ್ದಾರೆ.

‘ಶನಿವಾರದಿಂದ ಉಪವಾಸವನ್ನು ಆರಂಭಿಸಿದ್ದೇನೆ. ಉಪವಾಸ ಯಾರ ವಿರುದ್ಧವೂ ಅಲ್ಲ. ದೇವರು ಸಂತೋಷಪಟ್ಟು ಎಲ್ಲರಿಗೂ ಒಳಿತು ಮಾಡಿ ವಾತಾವರಣವು ಶುದ್ಧವಾಗಿ ಸರ್ವರೂ ಸಾಮರಸ್ಯದಿಂದ ಬದುಕುವಂತಾಗಲು ಶ್ರೀದೇವರ ಆಶೀರ್ವಾದ ಇರಲಿ ಎಂಬುದಾಗಿ ನನ್ನ ಪ್ರಾರ್ಥನೆ’.

‘ಮಠವು ಗೋಶಾಲೆಯು ಕಾರ್ಯನಿರ್ವಹಿಸುತ್ತಿದೆ. ಇವುಗಳಿಗೆ ಬೆಟ್ಟದಿಂದ ಸಹಜವಾಗಿ ಬರುವ ನೀರನ್ನು ಯಾರಿಗೂ ತೊಂದರೆಯಾಗದಂತೆ ತರಿಸುತ್ತಿದ್ದೆವು. ಇತ್ತೀಚೆಗೆ ಕೆಲವರು ಪ್ರತಿಭಟನೆ ಮಾಡಿ ಅದನ್ನು ನಿಲ್ಲಿಸುವಂತೆ ಮಾಡಿದರು. ಹಸುಗಳಿಗೆ ನೀರಿಲ್ಲದ ಪರಿಸ್ಥಿತಿ ಬಂದಿದೆ. ಇದರಿಂದ ಬೇಸರಗೊಂಡು ಈ ನಿರ್ಧಾರ ಮಾಡಿದ್ದೇನೆ’ ಎಂದರು.

ಉಪವಾಸ ಕೈಬಿಡಲಿ: ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರು ಕೂಡಲೇ ಉಪವಾಸ ಕೈಬಿಡಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT