ಮಂಗಳವಾರ, ಡಿಸೆಂಬರ್ 10, 2019
26 °C
Suchitra kannad films

ಸುಚಿತ್ರದಲ್ಲಿ ಕನ್ನಡ ಸಿನಿಮೋತ್ಸವ

Published:
Updated:
Deccan Herald

ಸುಚಿತ್ರ ಫಿಲಂ ಸೊಸೈಟಿಯಲ್ಲಿ ಭಾನುವಾರ (ಡಿ. 9) ಕನ್ನಡದ ಮೂರು ಅಪರೂಪದ ಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ. ಚಂಪಾ ಶೆಟ್ಟಿ ನಿರ್ದೇಶನದ ‘ಅಮ್ಮಚ್ಚಿಯೆಂಬ ನೆನಪು’, ಕೆ. ಸುಚೇಂದ್ರ ಪ್ರಸಾದ್ ನಿರ್ದೇಶನದ ‘ಸಂದಿಗ್ಧ’ ಹಾಗೂ ಕೋಡ್ಲು ರಾಮಕೃಷ್ಣ ನಿರ್ದೇಶನದ ’ಮಾರ್ಚ್ 22’ ಸಿನಿಮಾಗಳು ಪ್ರದರ್ಶನವಾಗಲಿವೆ.

ಅಮ್ಮಚ್ಚಿಯೆಂಬ ನೆನಪು: ಅವಧಿ–132 ನಿಮಿಷ,  ನಿರ್ದೇಶನ– ಚಂಪಾ ಶೆಟ್ಟಿ

ಲೇಖಕಿ ವೈದೇಹಿ ಅವರ ಮೂರು ಸಣ್ಣ ಕಥೆಗಳನ್ನಾಧರಿಸಿದ ಸಿನಿಮಾ. ಕರಾವಳಿ ಕರ್ನಾಟಕದಲ್ಲಿ ನಡೆಯುವ ವಿದ್ಯಮಾನಗಳನ್ನು ವೈದೇಹಿ ಸೂಕ್ಷ್ಮವಾಗಿ ಕಥೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯರು ಅನುಭವಿಸುವ ಸಂಕಷ್ಟಗಳನ್ನು ನಿರ್ದೇಶಕಿ ಚಂಪಾ ಶೆಟ್ಟಿ ಸೂಕ್ಷ್ಮವಾಗಿ ನಿರ್ದೇಶಿಸಿದ್ದಾರೆ.

ಸಂದಿಗ್ಧ: ಅವಧಿ–104 ನಿಮಿಷ, ನಿರ್ದೇಶನ–ಕೆ.ಸುಚೇಂದ್ರ ಪ್ರಸಾದ್

ಬಾಲ ಕಾರ್ಮಿಕ ಪದ್ಧತಿ ಮತ್ತು ಮಕ್ಕಳ ಹಕ್ಕುಗಳ ಕುರಿತ ಸಿನಿಮಾವಿದು. ಬಡ ಕುಟುಂಬದ ಸಹನಾ ಎನ್ನುವ ಪುಟ್ಟ ಹುಡುಗಿಯ ಕುರಿತ ಕಥೆಯನ್ನೊಳಗೊಂಡಿದೆ. ಅಪೌಷ್ಟಿಕತೆ, ಬಡತನದಿಂದ ಬಳಲುತ್ತಿರುವ ಶಿಕ್ಷಣದಿಂದ ವಂಚಿತವಾಗಿರುವ ಮಕ್ಕಳ ಕುರಿತು ಸಿನಿಮಾದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ಸಾಮಾಜಿಕ ಕಳಕಳಿಯುಳ್ಳ ಈ ಸಿನಿಮಾ ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ.

ಮಾರ್ಚ್‌ 22: ಅವಧಿ–152 ನಿಮಿಷ. ನಿರ್ದೇಶನ–ಕೋಡ್ಲು ರಾಮಕೃಷ್ಣ

ರಾಯದುರ್ಗದಲ್ಲಿ ಶಾಂತಿಯುತವಾಗಿ ಜೀವನ ನಡೆಸುತ್ತಿರುವ ಕುಟುಂಬದಲ್ಲಿ ಅನ್ಯವ್ಯಕ್ತಿಯ ಪ್ರವೇಶದಿಂದಾಗಿ ಉಂಟಾಗುವ ತಲ್ಲಣಗಳನ್ನು ‘ಮಾರ್ಚ್‌ 22’ ಸಿನಿಮಾ ಕಟ್ಟಿಕೊಡುತ್ತದೆ.‌

ಮೂರು ಸಿನಿಮಾಗಳಿಗೆ ಪ್ರಾತಿನಿಧಿಕ ಶುಲ್ಕ ₹ 200. ಸುಚಿತ್ರ ಫಿಲಂ ಸೊಸೈಟಿ ಸದಸ್ಯರಿಗೆ ಉಚಿತ ಪ್ರವೇಶ. ಪ್ರತಿ ಸಿನಿಮಾ ಪ್ರದರ್ಶನದ ನಂತರ ಆಯಾ ಚಿತ್ರಗಳ ನಿರ್ದೇಶಕರೊಂದಿಗೆ ಸಂವಾದ ನಡೆಯಲಿದೆ.

ಸ್ಥಳ–ಸುಚಿತ್ರ ಫಿಲಂ ಸೊಸೈಟಿ, ನಂ.36, 9ನೇ ಮೇನ್, ಬಿ.ವಿ.ಕಾರಂತ ರಸ್ತೆ, ಬನಶಂಕರಿ 2ನೇ ಹಂತ. ಮಾಹಿತಿಗೆ: 080–2671 1785.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು