ಮಾಸಾಶನ ದೊರೆಯದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಅಂಗವಿಕಲ: ತನಿಖೆಗೆ ಆದೇಶ

7
ವಾರ್ಷಿಕ ₹ 15 ಸಾವಿರ ಆದಾಯ; ಮಾಸಾಶನಕ್ಕೆ ತಡೆ

ಮಾಸಾಶನ ದೊರೆಯದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಅಂಗವಿಕಲ: ತನಿಖೆಗೆ ಆದೇಶ

Published:
Updated:

ತುಮಕೂರು: ಮಾಸಾಶನ ದೊರೆಯದಿದ್ದಕ್ಕೆ ಮನ ನೊಂದು ತಾಲ್ಲೂಕಿನ ಕೋರ ಹೋಬಳಿಯ ಲಿಂಗಯ್ಯನ ಪಾಳ್ಯದ ಅಂಗವಿಕಲ ಧರಣಿಂದ್ರ (20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಧರಣಿಂದ್ರ ಈ ಹಿಂದೆ ಮಾಸಾಶನ ಪಡೆಯುತ್ತಿದ್ದರು. ನವೀಕರಣದ ಸಮಯದಲ್ಲಿ ವಾರ್ಷಿಕ ₹ 15 ಸಾವಿರ ಆದಾಯ ಇದೆ ಎಂದು ಆದಾಯ ಪ್ರಮಾಣ ಪತ್ರದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ನಮೂದಿಸಿದರು‌. ಇದರಿಂದ ಮಾಸಾಶನಕ್ಕೆ ತಡೆ ಬಿದ್ದಿತು. ಸಾಯುವ ಮುನ್ನ ಈ ಬಗ್ಗೆ ವಿಡಿಯೊ ಸಹ ಮಾಡಿದ್ದಾರೆ. ಅದರಲ್ಲಿ ತಹಶಿಲ್ದಾರರ್ ಪರಮೇಶ್ ಎಂಬುವವರು ಮಾಸಾಶನ ಬರುವುದಿಲ್ಲ ಎಂದಿರುವುದನ್ನು ಧರಣಿಂದ್ರ ಉಲ್ಲೇಖಿಸಿದ್ದಾರೆ.

ತನಿಖೆ: ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ವಿಡಿಯೊದಲ್ಲಿ ಹೆಸರಿಸಿರುವ ಪರಮೇಶ್ ಎಂಬುವವರು ನಮ್ಮಲ್ಲಿ ಕೇಸ್ ವರ್ಕರ್ ಇದ್ದಾರೆ. ತಪ್ಪು ಕಂಡು ಬಂದಲ್ಲಿ ಅಮಾನತುಗೊಳಿಸಲಾಗುವುದು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದ್ದಾರೆ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 6

  Sad
 • 0

  Frustrated
 • 0

  Angry

Comments:

0 comments

Write the first review for this !