ಯುವತಿ ಅಪಹರಿಸಿ ಅತ್ಯಾಚಾರ

7
Rape, Mangalore

ಯುವತಿ ಅಪಹರಿಸಿ ಅತ್ಯಾಚಾರ

Published:
Updated:

ಸುಳ್ಯ: ತಾಲ್ಲೂಕಿನ ಅಮರಪಡ್ನೂರು ಗ್ರಾಮದ ಶೇಣಿ ಎಂಬಲ್ಲಿ ಸೋಮವಾರ ಸಂಜೆ ನಾಲ್ಕು ಜನರ ತಂಡ ಯುವತಿಯೊಬ್ಬಳನ್ನು ರಿಕ್ಷಾದಲ್ಲಿ ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿದೆ.

ಈ ಸಂಬಂಧ ಯುವತಿ ಮಂಗಳವಾರ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ.

‘ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಹಾಲು ಹಾಕಿದ ಯುವತಿ ಸಂಜೆ ಸುಮಾರು 5 ಗಂಟೆಗೆ ಮನೆಯತ್ತ ಬರುತ್ತಿದ್ದರು. ನಿರ್ಜನ ಪ್ರದೇಶದಲ್ಲಿ ಆಟೊದಲ್ಲಿ ಬಂದ ಚಾಲಕ ಸಹಿತ ನಾಲ್ವರು ಆಕೆಯನ್ನು ಅಡ್ಡಗಟ್ಟಿದರು. ಆಕೆಯನ್ನು ಎಳೆದು ಆಟೊದ ಒಳಗೆ ಕೂಡಿ ಹಾಕಿ ನಿರ್ಜನ ಪ್ರದೇಶದಲ್ಲಿರುವ ರಬ್ಬರ್ ತೋಟಕ್ಕೆ ಕರೆದೊಯ್ದರು. ಅಲ್ಲಿ ಅತ್ಯಾಚಾರ ನಡೆಸಿ, ಆಕೆಯನ್ನು ವಾಪಸ್‌ ತಂದು ಬಿಟ್ಟರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇನ್‌ಸ್ಪೆಕ್ಟರ್‌ ಸತೀಶ್‌ಕುಮಾರ್ ಅವರ ನೇತೃತ್ವದಲ್ಲಿ ಎಸ್‌ಐಗಳಾದ ಮಂಜುನಾಥ ಮತ್ತು ಈರಯ್ಯ ಅವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !