ಸುಮಲತಾ ಚುನಾವಣೆಗೆ ಸ್ಪರ್ಧೆ: ಸುಳಿವು ಬಿಟ್ಟುಕೊಟ್ಟ ವಿಡಿಯೊ

ಬುಧವಾರ, ಮಾರ್ಚ್ 20, 2019
31 °C

ಸುಮಲತಾ ಚುನಾವಣೆಗೆ ಸ್ಪರ್ಧೆ: ಸುಳಿವು ಬಿಟ್ಟುಕೊಟ್ಟ ವಿಡಿಯೊ

Published:
Updated:

ಬೆಂಗಳೂರು: ‘ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇನೆ’ ಎನ್ನುವ ಮೂಲಕ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗುವ ಬಗ್ಗೆ ಸುಮಲತಾ ಅಂಬರೀಷ್‌ ಸುಳಿವು ನೀಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಾರ್ಚ್‌ 18ಕ್ಕೆ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದ ಸುಮಲತಾ ಅವರು, ಈಗ ಸದ್ದಿಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಚುನಾವಣಾ ಸಿದ್ಧತೆಯನ್ನು ಶುರುಮಾಡಿದ್ದಾರೆ.

‘ನಮಸ್ಕಾರ , ನಾನು ನಿಮ್ಮ ಸುಮಲತಾ ಅಂಬರೀಶ್‌. ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌ನಲ್ಲಿ ನಾನು ನಿಮ್ಮ ಸಂಪರ್ಕದಲ್ಲಿರುತ್ತೇನೆ. ಇದು ನನ್ನ ಅಧಿಕೃತ ಪೇಜ್‌ ಆಗಿರುತ್ತದೆ. ಧನ್ಯವಾದಗಳು’ ಎಂಬ ವಿಡಿಯೊವೊಂದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸುಮಲತಾ ಅಂಬರೀಶ್‌ ಎನ್ನುವ ಹೆಸರಿನಲ್ಲಿ ಮಾರ್ಚ್‌ 9ರಂದು ಫೇಸ್‌ಬುಕ್‌ ಪುಟ ಆರಂಭಿಸಿರುವ ಅವರು, ಜನರಿಗೆ ನಮಸ್ಕರಿಸುವ ಫೋಟೊವನ್ನೇ ಪ್ರೋಫೈಲ್‌ ಚಿತ್ರವನ್ನಾಗಿ ಹಾಕಿದ್ದಾರೆ. ಇದೆಲ್ಲವನ್ನು ನೋಡಿದರೆ ಸುಮಲತಾ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದೇ ಜನ ಮಾತನಾಡುತ್ತಿದ್ದಾರೆ.

ವಿಡಿಯೊದ ಪ್ರತಿಕ್ರಿಯೆಯಲ್ಲಿಯೇ ಸುಮಲತಾ ಪರವಾಗಿ ಪ್ರಚಾರ ಕಾರ್ಯ ಶುರುವಾಗಿದೆ. ‘ನೀವು, ಏನೇ ತೀರ್ಮಾನ ಕೈಗೊಂಡರು ನಾವು ನಿಮ್ಮ ಜೊತೆ ಇರುತ್ತೇವೆ’ ಎಂದು ಅಂಬರೀಶ್‌ ಅವರ ಅಭಿಮಾನಿಗಳು ಭರವಸೆ ನೀಡಿದ್ದಾರೆ.

ಸುಮಲತಾ ಅವರ ವಿಡಿಯೊಗೆ 662 ಮಂದಿ ಪ್ರತಿಕ್ರಿಯಿಸಿದ್ದು, 4200 ಮಂದಿ ಇದನ್ನು ವೀಕ್ಷಿಸಿದ್ದಾರೆ. ಈ ವಿಡಿಯೊಗೆ ಪ್ರತಿಕ್ರಿಸಿರುವ ಎಲ್ಲರೂ ರಾಜಕೀಯದ ಬಗ್ಗೆಯೇ ಮಾತನಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 60

  Happy
 • 1

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !