ಬಿಸಿಲಿನ ತಾಪ: ಮಗುವಿಗೆ ಗಾಯ

ಶನಿವಾರ, ಏಪ್ರಿಲ್ 20, 2019
29 °C

ಬಿಸಿಲಿನ ತಾಪ: ಮಗುವಿಗೆ ಗಾಯ

Published:
Updated:

ಕಾಸರಗೋಡು: ಜಿಲ್ಲೆಯಲ್ಲಿ ಬಿಸಿಲಿನ ತಾಪ ಮುಂದುವರಿದಿದ್ದು, ಪಳ್ಳಿಕೆರೆ ಪೂಚಕ್ಕಾಡಿನಲ್ಲಿ ಮೂರು ವರ್ಷದ ಮಗುವಿಗೆ ಸುಟ್ಟ ಗಾಯಗಳಾಗಿವೆ.

ಪೂಚಕ್ಕಾಡು ಹಮೀದ್ ಎಂಬುವವರ ಮಗ ನಿಜಾವತ್‌ ತಂದೆ ಜತೆಯಲ್ಲಿ ಬೈಕ್‌ನಲ್ಲಿ ಚೆಮ್ನಾಡಿನಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ಬಿಸಿಲಿನಿಂದ ಮೈಕೈ ಸುಟ್ಟ ಗಾಯವಾಯಿತು. ಆತನನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು.

ಕಾಸರಗೋಡು ಸಹಿತ ಕೇರಳದ ಎಂಟು ಜಿಲ್ಲೆಯಲ್ಲಿ ಬುಧವಾರ ಸರಾಸರಿಗಿಂತ ಮೂರು ಡಿಗ್ರಿಯಷ್ಟು ಉಷ್ಣತೆ ಹೆಚ್ಚಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೂರ್ಯಾಘಾತ ತಟ್ಟದಿರಲು ಜನರು ಹಗಲು 11 ಗಂಟೆಯಿಂದ ಮೂರು ಗಂಟೆಯವರೆಗೆ ಉರಿಬಿಸಿಲಿನಲ್ಲಿ ನಿಲ್ಲಬಾರದು ಎಂದು ತಿಳಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !