ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಸ್ಥಿತಿ ರೈತರದ್ದು: ಯಡಿಯೂರಪ್ಪ

7

ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಸ್ಥಿತಿ ರೈತರದ್ದು: ಯಡಿಯೂರಪ್ಪ

Published:
Updated:

ಬೆಂಗಳೂರು: ‘ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ನೀಡಿ (ಎಂಎಸ್‌ಪಿ) ರೈತರಿಂದ ಹೆಸರು ಹಾಗೂ ಉದ್ದು ಕಾಳುಗಳನ್ನು ಖರೀದಿಸದೆ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಸ್ಥಿತಿ ರೈತರದ್ದು ಆಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

‘ಒಂದು ತಿಂಗಳಲ್ಲಿ 1,547 ರೈತರಿಂದ ಕೇವಲ 6,927 ಕ್ವಿಂಟಲ್‌ ಹೆಸರುಕಾಳು ಖರೀದಿ ಮಾಡಲಾಗಿದೆ. ಇನ್ನುಳಿದ ಆರು ದಿನಗಳಲ್ಲಿ 1.13 ಲಕ್ಷ ರೈತರಿಂದ 2.26 ಲಕ್ಷ ಕ್ವಿಂಟಲ್‌ ಹೆಸರುಕಾಳು ಖರೀದಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಹೆಸರುಕಾಳು ಉತ್ಪನ್ನವನ್ನು ಬೆಂಬಲಬೆಲೆಗೆ ನೀಡಲು ನೋಂದಣಿ ಮಾಡಿಸಿದ್ದಾರೆ. ಆದರೆ, ಈ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ’ ಎಂದು ಟೀಕಿಸಿದ್ದಾರೆ.

ಹೆಸರುಕಾಳು ಖರೀದಿ ದಿನಾಂಕವನ್ನು ನವೆಂಬರ್‌ 30ರ ವರೆಗೆ ವಿಸ್ತರಿಸಬೇಕು. ಪ್ರತಿ ರೈತರಿಂದ 10 ಕ್ವಿಂಟಲ್‌ ಖರೀದಿಯನ್ನು ನಾಲ್ಕು ಕ್ವಿಂಟಲ್‌ಗೆ ಇಳಿಸಲಾಗಿದೆ. ಈ ಆದೇಶವನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !