ಗುರುವಾರ , ನವೆಂಬರ್ 14, 2019
19 °C
‘ಸುಪ್ರೀಂ’ಗೆ ಚುನಾವಣಾ ಆಯೋಗದ ಮನವಿ

ಅನರ್ಹ ಶಾಸಕರ ಅರ್ಜಿ ವಿಚಾರಣೆ ಇಂದು

Published:
Updated:

ನವದೆಹಲಿ: ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಿರುವ ಸ್ಪೀಕರ್‌ ಆದೇಶದ ಸಿಂಧುತ್ವ ಪ್ರಶ್ನಿಸಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ (ಅ.22) ಕೈಗೆತ್ತಿಕೊಳ್ಳಲಿದೆ.

ಮಂಗಳವಾರಕ್ಕೆ ಬದಲಾಗಿ ಬುಧವಾರ ವಿಚಾರಣೆ ನಡೆಸುವಂತೆ ಕಾಂಗ್ರೆಸ್‌ ಪರ ವಕೀಲ ಕಪಿಲ್‌ ಸಿಬಲ್‌ ಬೆಳಿಗ್ಗೆ ಮಾಡಿಕೊಂಡ ಮೌಖಿಕ ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಮೂರ್ತಿ ಎನ್‌.ವಿ. ರಮಣ ಪೀಠ ಬುಧವಾರಕ್ಕೆ ವಿಚಾರಣೆ ನಿಗದಿಪಡಿಸಿತ್ತು.

ಪ್ರತಿಕ್ರಿಯಿಸಿ (+)