ಶುಕ್ರವಾರ, ನವೆಂಬರ್ 22, 2019
25 °C

ನಾಗಿನ್‌ ಖ್ಯಾತಿಯ ಸುರಭಿ ಜ್ಯೋತಿ ಅಭಿಷೇಕ್ ಬಚ್ಚನ್‌ಗೆ ನಾಯಕಿ

Published:
Updated:

‘ನಾಗಿನ್‌’ ಧಾರಾವಾಹಿಯಲ್ಲಿ ನಟಿಸಿ ಮನೆಮಾತಾಗಿರುವ ಸುರಭಿ ಜ್ಯೋತಿ ಈಗ ಬಾಲಿವುಡ್‌ ಪ್ರವೇಶಿಸಲಿದ್ದಾರೆ.

ಇತ್ತೀಚೆಗಷ್ಟೇ ಕಿರುತೆರೆಯ ನಟಿ, ಆಶಾ ನೇಗಿ ಅವರಿಗೆ ಬಾಲಿವುಡ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅಭಿಷೇಕ್ ಬಚ್ಚನ್‌ ಜೊತೆ ಅನುರಾಗ್‌ ಬಸು ನಿರ್ದೇಶನದ ಹೆಸರಿಡದ ಸಿನಿಮಾವೊಂದಕ್ಕೆ ನಾಯಕಿಯಾಗಿ ಅವರು ಆಯ್ಕೆಯಾಗಿದ್ದರು. ಸುರಭಿ ‘ನಾಗಿನ್‌ 3’ ಧಾರಾವಾಹಿ ಮೂಲಕ ಪ್ರಖ್ಯಾತಿ ಗಳಿಸಿದ್ದಾರೆ.

ಪಂಜಾಬ್‌ನ ಮ್ಯೂಸಿಕ್‌ ಕಲಾವಿದ ಜೆಸ್ಸಿ ಗಿಲ್‌ ಅವರೊಂದಿಗೆ ‘ಬೇವಫಾ ಹೈ’ ಸಿನಿಮಾದಲ್ಲಿ ನಟಿಸಲಿದ್ದಾರೆ. ರೊಮ್ಯಾಂಟಿಕ್‌ ಕಾಮಿಡಿ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ನೀಲು ಕೊಹ್ಲಿ ಹಾಗೂ ಬ್ರಿಜೇಂದ್ರ ಕಾಲಾ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪಂಜಾಬ್‌ನ ಕೆಲವು ಧಾರಾವಾಹಿ ಹಾಗೂ ಕಿರುಚಿತ್ರಗಳಲ್ಲೂ ಸುರಭಿ ನಟಿಸಿದ್ದಾರೆ.

ಇದನ್ನೂ ಓದಿ: ಕಿರುತೆರೆಯ ‘ಮಣಿಕರ್ಣಿಕಾ’ ಅನುಷ್ಕಾ ಸೇನ್‌

ಪ್ರತಿಕ್ರಿಯಿಸಿ (+)