ಸೋಮವಾರ, ಡಿಸೆಂಬರ್ 9, 2019
16 °C
ಉನ್ನತ ಶಿಕ್ಷಣ ಸಮೀಕ್ಷೆ: ಕರ್ನಾಟಕಕ್ಕೆ 2ನೇ ಸ್ಥಾನ

ಪಿಎಚ್‌.ಡಿಗೆ ವಿದ್ಯಾರ್ಥಿನಿಯರ ಪ್ರವೇಶ: ರಾಜ್ಯವೇ ಟಾಪರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ವಿಭಾಗದ 2019ನೇ ಸಾಲಿನ ಸಮೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಶೇ 50.04ರಷ್ಟು ವಿದ್ಯಾರ್ಥಿನಿಯರು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಮೂಲಕ ದೇಶದಲ್ಲೇ ಮುಂಚೂಣಿಯಲ್ಲಿದ್ದಾರೆ.

2018ನೇ ಸಾಲಿನಲ್ಲಿ 5,020 ಮಂದಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿರುವ ರಾಜ್ಯ ಎರಡನೇ ಸ್ಥಾನ ದಲ್ಲಿದೆ. 5,844 ಮಂದಿಗೆ ಪಿಎಚ್‌.ಡಿ. ಪ್ರದಾನ ಮಾಡಿರುವ ತಮಿಳುನಾಡು ಪ್ರಥಮ ಸ್ಥಾನದಲ್ಲಿದೆ. ದೇಶದಲ್ಲಿ ಒಟ್ಟು 40,813 ಮಂದಿ ಪಿಎಚ್‌.ಡಿ ಪಡೆದಿದ್ದಾರೆ.

ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿ
ದ್ದರೆ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳಗಳು ಬಳಿಕದ ಸ್ಥಾನದಲ್ಲಿವೆ. ಈ ಆರು ರಾಜ್ಯಗಳಲ್ಲೇ ದೇಶದ ಒಟ್ಟು ಪ್ರವೇಶಾತಿಯ ಶೇ 54.23ರಷ್ಟು ಮಂದಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ.

ಉತ್ತರ ಪ್ರದೇಶದಲ್ಲಿ 8,077 ಉನ್ನತ ಶಿಕ್ಷಣ ಸಂಸ್ಥೆಗಳಿದ್ದರೆ, ಮಹಾ ರಾಷ್ಟ್ರದಲ್ಲಿ 6,662, ಕರ್ನಾಟಕ ದಲ್ಲಿ 5,028, ರಾಜಸ್ಥಾನದಲ್ಲಿ 3,723, ಆಂಧ್ರ ಪ್ರದೇಶದಲ್ಲಿ 3,540 ಹಾಗೂ ತಮಿಳುನಾಡಿನಲ್ಲಿ 3,443 ಸಂಸ್ಥೆಗಳಿವೆ. ಇವುಗಳಲ್ಲಿ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳು ಮತ್ತು ಅರೆವೈದ್ಯಕೀಯ, ಡಿಪ್ಲೊಮಾ, ಹೋಟೆಲ್‌ ಮ್ಯಾನೇಜ್‌ಮೆಂಟ್‌ಗಳಂತಹ ಸ್ವತಂತ್ರ ಸಂಸ್ಥೆಗಳು ಸೇರಿವೆ.

ಸಮೀಕ್ಷೆಯಂತೆ ದೇಶದಲ್ಲಿ 993 ವಿಶ್ವವಿದ್ಯಾಲಯಗಳು, 39,931 ಕಾಲೇಜುಗಳು ಹಾಗೂ 10,725 ಸ್ವತಂತ್ರ ಸಂಸ್ಥೆಗಳು ಸೇರಿವೆ. ಇಲ್ಲಿ ಒಟ್ಟು 4,16,299 ಬೋಧಕರಿದ್ದಾರೆ. ಬಿಹಾರದಲ್ಲಿ ಪುರುಷ ಮತ್ತು ಮಹಿಳಾ ಬೋಧಕರ ಅನುಪಾತ 78:21ರಷ್ಟಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು