ಸಮುದ್ರದಾಳದಲ್ಲಿ 'ಸುವರ್ಣ ತ್ರಿಭುಜ': ಚಿತ್ರ ಬಿಡುಗಡೆ ಮಾಡಿದ ನೌಕಾಪಡೆ

ಶನಿವಾರ, ಮೇ 25, 2019
22 °C

ಸಮುದ್ರದಾಳದಲ್ಲಿ 'ಸುವರ್ಣ ತ್ರಿಭುಜ': ಚಿತ್ರ ಬಿಡುಗಡೆ ಮಾಡಿದ ನೌಕಾಪಡೆ

Published:
Updated:

ಕಾರವಾರ: ಸಮುದ್ರದಲ್ಲಿ ಮುಳುಗಿರುವ ಮೀನುಗಾರಿಕಾ ದೋಣಿ ‘ಸುವರ್ಣ ತ್ರಿಭುಜ’ದ ಅವಶೇಷಗಳ ಚಿತ್ರಗಳನ್ನು ಭಾರತೀಯ ನೌಕಾಪಡೆ ಗುರುವಾರ ಬಿಡುಗಡೆ ಮಾಡಿದೆ. 

ಮಹಾರಾಷ್ಟ್ರದ ಮಾಲ್ವಾನ್‌ನಿಂದ ಅಂದಾಜು 35 ಕಿ.ಮೀ. ದೂರದ ಆಳ ಸಮುದ್ರದಲ್ಲಿರುವ ದೋಣಿಯ ಅವಶೇಷಗಳನ್ನು ಮೇ 3ರಂದು ನೌಕಾಪಡೆಯ ಸಿಬ್ಬಂದಿ ಹಾಗೂ ಮೀನುಗಾರರು ಪತ್ತೆ ಹಚ್ಚಿದ್ದರು. ನೌಕಾಪಡೆಯ ‘ಐಎನ್‌ಎಸ್ ನಿರೀಕ್ಷಕ್’ ಹಡಗು ಹಾಗೂ ‘ಸೋನಾರ್’ ತಂತ್ರಜ್ಞಾನ ಬಳಸಿಕೊಂಡು ದೋಣಿ ಪತ್ತೆ ಹಚ್ಚಲಾಗಿತ್ತು.

ಬಳಿಕ ಸಮುದ್ರದಾಳಕ್ಕೆ ತೆರಳಿದ ನೌಕಾಪಡೆಯ ಮುಳುಗು ತಜ್ಞರು, ‘ಸುವರ್ಣ ತ್ರಿಭುಜ’ ದೋಣಿಯ ಅವಶೇಷಗಳಿರುವುದನ್ನು ಖಚಿತ ಪಡಿಸಿದ್ದರು. ಈ ಎಲ್ಲ ಪ್ರಕ್ರಿಯೆಗಳನ್ನು ವಿಡಿಯೊ ಚಿತ್ರೀಕರಣ ಹಾಗೂ ಫೋಟೊಗ್ರಾಫ್ ಮಾಡಲಾಗಿತ್ತು.

ಡಿ.15ರಂದು ಮಲ್ಪೆಯಿಂದ ಹೊರಟಿದ್ದ ದೋಣಿಯಲ್ಲಿ ಏಳು ಮೀನುಗಾರರಿದ್ದರು. ತಿಂಗಳುಗಳೇ ಕಳೆದರೂ ಅವರ ಹಾಗೂ ದೋಣಿಯ ಸುಳಿವು ಸಿಕ್ಕಿರಲಿಲ್ಲ. ಈವರೆಗೆ ದೋಣಿ ಮಾತ್ರ ಪತ್ತೆಯಾಗಿದ್ದು, ಮೀನುಗಾರರ ಸುಳಿವು ಇನ್ನೂ ಸಿಕ್ಕಿಲ್ಲ.

ಇದನ್ನೂ ಓದಿ: ‘ಸುವರ್ಣ ತ್ರಿಭುಜ’ ಮುಳುಗಿದ್ದು ಹೇಗೆ?​

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 6

  Sad
 • 0

  Frustrated
 • 0

  Angry

Comments:

0 comments

Write the first review for this !