ಬುಧವಾರ, ಅಕ್ಟೋಬರ್ 23, 2019
27 °C

ಈಜು ಚಾಂಪಿಯನ್‌ಷಿಪ್‌: ಪಲಕ್‌ ಶರ್ಮಾ, ಸಿದ್ಧಾರ್ಥ್‌ಗೆ ಚಿನ್ನದ ಪದಕ

Published:
Updated:
Prajavani

ಬೆಂಗಳೂರು: ಡೈವಿಂಗ್‌ ‍ಪಟುಗಳಾದ ಪಲಕ್‌ ಶರ್ಮಾ ಹಾಗೂ ಸಿದ್ಧಾರ್ಥ್‌ ಪರ್ದೇಶಿ ಏಷ್ಯನ್‌ ವಯೋವರ್ಗ ಈಜು ಚಾಂಪಿಯನ್‌ಷಿಪ್‌ನಲ್ಲಿ ಮತ್ತೆರಡು ಚಿನ್ನದ ಪದಕ ಗೆದ್ದರು. ಇದರೊಂದಿಗೆ ಭಾರತ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 64 (20 ಚಿನ್ನ, 24 ಬೆಳ್ಳಿ, 20 ಕಂಚು) ಪದಕಗಳನ್ನು ತನ್ನದಾಗಿಸಿಕೊಂಡಿತು. 

ಬುಧವಾರ ಇಲ್ಲಿಯ ಹಲಸೂರು ಕೆನ್ಸಿಂಗ್ಟನ್‌ ಈಜುಕೊಳದಲ್ಲಿ ನಡೆದ ಸ್ಪರ್ಧೆಯಲ್ಲಿ ಪಲಕ್‌ ಶರ್ಮಾ ಅವರು ಬಾಲಕಿಯರ 5ಮೀ./7.5 ಮೀ. ಪ್ಲಾಟ್‌ಫಾರ್ಮ್‌ ಡೈವಿಂಗ್‌ ವಿಭಾಗದಲ್ಲಿ 162.70 ಪಾಯಿಂಟ್ಸ್‌ಗಳೊಂದಿಗೆ ಮೊದಲಿಗರಾದರು. ಇಂಡೊನೇಷ್ಯಾದ ಸುದಿರ್ಮನ್‌ ನೂರ್‌ ನುಫಿಧಾ (150.65 ಪಾಯಿಂಟ್ಸ್) ಬೆಳ್ಳಿ ಗೆದ್ದರೆ, ಫಿಲಿಪ್ಪೀನ್ಸ್‌ನ ವಿಲ್‌ಫೊರ್‌ ಜನಾ ಮೇರಿ 149.30 ಪಾಯಿಂಟ್ಸ್ ಗಳಿಸಿ ಕಂಚು ತಮ್ಮದಾಗಿಸಿಕೊಂಡರು.

ಪುರುಷರ 10 ಮೀಟರ್‌ ಮುಕ್ತ ವಿಭಾಗದಲ್ಲಿ ಸಿದ್ಧಾರ್ಥ್‌ ಪರ್ದೇಶಿ 379 ಪಾಯಿಂಟ್ಸ್ ಗಳಿಸಿ ಚಿನ್ನಕ್ಕೆ ಮುತ್ತಿಟ್ಟರು. ಇರಾನ್‌ ಮೊತಜಬಾ ವಲಿಪೊರ್‌ (273.25 ಪಾಯಿಂಟ್ಸ್) ಬೆಳ್ಳಿ ಹಾಗೂ ಕತಾರ್‌ನ ಶೆವೈತರ್‌ ಮೊಹಮ್ಮದ್‌ ಅಹ್ಮದ್‌ (266.50 ಪಾಯಿಂಟ್ಸ್) ಕಂಚು ಗೆದ್ದರು. ಕಲಾತ್ಮಕ ಈಜು ಸ್ಪರ್ಧೆಯಲ್ಲಿ ಕಜಕಸ್ತಾನ ಒಟ್ಟು 24 ಪದಕಗಳನ್ನು ತನ್ನದಾಗಿಸಿಕೊಂಡಿತು. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)