ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಸಾರ್ಟ್‌ನಿಂದ ಹೊರಹೋದರೇ ಶಾಸಕ ಶ್ರೀಮಂತ ಪಾಟೀಲ್‌?

Last Updated 18 ಜುಲೈ 2019, 3:14 IST
ಅಕ್ಷರ ಗಾತ್ರ

ರಾಜ್ಯದ ಮೈತ್ರಿ ಸರ್ಕಾರದ ಅಳಿವು–ಉಳಿವಿನ ಪ್ರಶ್ನೆಯನ್ನು ಹುಟ್ಟು ಹಾಕಿದ್ದ ಅತೃಪ್ತ ಶಾಸಕರ ರಾಜೀನಾಮೆ ಮತ್ತು ಅನರ್ಹತೆಗೆ ಸಂಬಂಧಿಸಿದ ಮಹತ್ವದ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್‌ ಇಂದು ಮಧ್ಯಂತರ ಆದೇಶ ನೀಡಿದೆ. ‘ಸೂಕ್ತ ಕಾಲಮಿತಿಯಲ್ಲಿ ಪ್ರಕರಣವನ್ನು ಇತ್ಯರ್ಥ ಮಾಡುವಂತೆ’ ಸ್ಪೀಕರ್‌ಗೆ ಹೇಳಿದೆ. ಇದು ಮಧ್ಯಂತರ ಆದೇಶವಾಗಿದ್ದು, ಪ್ರಕರಣದ ವಿಸ್ತೃತ ವಿಚಾರಣೆಯ ನಂತರ ಅಂತಿಮ ತೀರ್ಪು ನೀಡುವುದಾಗಿಯೂ ತಿಳಿಸಿದೆ. ‘ಗುರುವಾರ ಕರ್ನಾಟಕ ವಿಧಾನಸಭೆಯಲ್ಲಿ ನಡೆಯುವ ವಿಶ್ವಾಸಮತ ಪ್ರಕ್ರಿಯೆಗೆಸದ್ಯ ರಾಜೀನಾಮೆ ಸಲ್ಲಿಸಿರುವ 15 ಶಾಸಕರು ಬರಲೇ ಬೇಕು ಎಂದು ಒತ್ತಡ ಹೇರುವಂತಿಲ್ಲ ಮತ್ತು ಅವರಿಗೆ ವಿಪ್‌ ಅನ್ವಯವಾಗದು,’ ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ. ಕೋರ್ಟ್‌ನ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಹಲವು ಮಹತ್ತರ ಬೆಳವಣಿಗೆಗಳು ನಡೆಯುತ್ತಿವೆ. ಅದರ ಸಂಪೂರ್ಣಮಾಹಿತಿ ಇಲ್ಲಿ ಲಭ್ಯವಿದೆ.

ರಾ. 11.30 : ನಾಪತ್ತೆ ಆಗುತ್ತಿರುವ ಮತ್ತಷ್ಟು ಕಾಂಗ್ರಸ್‌ ಶಾಸಕರು

ಪ್ರಕೃತಿ ರೆಸಾರ್ಟ್‌ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರ ಪೈಕಿ ವಿ. ಮುನಿಯಪ್ಪ (ಶಿಡ್ಲಘಟ್ಟ) ಮತ್ತು ಶ್ರೀಮಂತ ಪಾಟೀಲ (ಕಾಗವಾಡ)ಬುಧವಾರ ರಾತ್ರಿ ನಾಪತ್ತೆಯಾಗಿರುವುದು ಪಕ್ಷದ ನಾಯಕರಲ್ಲಿ ಗಲಿಬಿಲಿ ಉಂಟು ಮಾಡಿದೆ.ಇಬ್ಬರು ಶಾಸಕರು ರೆಸಾರ್ಟ್‌ನಿಂದ ಹೊರಗೆ ಹೋಗಿದ್ದು, ಅವರ ಮೊಬೈಲ್‌ಗಳು ಸ್ವಿಚ್ಆಫ್ ಆಗಿವೆ. ಶೋಧ ಕಾರ್ಯ ನಡೆದಿದೆ.

04.08:ಸ್ಪೀಕರ್‌ ಭೇಟಿ ಮಾಡಲುಮಾಧುಸ್ವಾಮಿ, ಕೆ.ಜಿ.ಭೋಪಯ್ಯ, ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ನಿಯೋಗ ತೆರಳಿದೆ.

04.00:ಸದನದಿಂದ ಹೊರಗಳಿಯುವವರಿಗೆ ಸಭಾಧ್ಯಕ್ಷರ ಅನುಮತಿ ಪಡೆಯಬೇಕು. ನ್ಯಾಯಾಲಯದ ತೀರ್ಪಿನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ವಾದ ಮಂಡನೆ ಮಾಡಲು ನಮಗೆ ಅವಕಾಶ ಕೊಟ್ಟಿರಲಿಲ್ಲ. ಆ ಮೂಲಕ ನಮ್ಮ ಹಕ್ಕನ್ನು ಮೊಟುಕುಗೊಳಿಸುವ ಹಕ್ಕು ಉದ್ಭವವಾಗುತ್ತದೆ. ಈ ಸಂಬಂಧ ನಾವು ನಾಳೆಯೊಳಗೆ ನಿರ್ಧಾರ ಕೈಗೊಳ್ಳುತ್ತೇವೆ. ಚರ್ಚೆಯ ಪ್ರಕಾರ ವಿಪ್‌ ಜಾರಿ ಮಾಡಬೇಕು ಎಂಬ ಅಭಿಪ್ರಾಯುವಿದೆ ಎರಡೂ ಪಕ್ಷದಲ್ಲಿ ಬಂದಿದೆ. ಆದರೆ, ಅದು ಇನ್ನೂ ನಿರ್ಧಾವಾಗಿಲ್ಲ. –ಸಚಿವ ಕೃಷ್ಣ ಭೈರೇಗೌಡ

03.45:ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮೈತ್ರಿ ಪಕ್ಷದ ನಾಯಕರು ಸ್ಪೀಕರ್‌ ಕಚೇರಿಗೆ ದೌಡು.

03.40: ಶಾಸಕರ ರಾಜೀನಾಮೆ ವಿಚಾರವಾಗಿ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ನೀಡಿದ ಬಳಿಕ ಸ್ಪೀಕರ್‌ ಕೆ.ಆರ್‌. ರಮೇಶ್‌ಕುಮಾರ್‌ ಅವರು ವಿಧಾನಸೌಧದ ತಮ್ಮ ಕಚೇರಿಗೆ ಬಂದಿದ್ದಾರೆ.

ಶಾಸಕಾಂಗದ ಕೆಲಸದಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಮಾಡಿದೆ: ದಿನೇಶ್ ಗುಂಡೂರಾವ್​

03.30: ಶಾಸಕಾಂಗದ ಕೆಲಸದಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಮಾಡಿದೆ. ಇದರ ಬಗ್ಗೆ ಪಕ್ಷಭೇದ ಮರೆತು ಸದನದಲ್ಲಿ ಚರ್ಚೆ ಮಾಡಬೇಕಿದೆ.ಸುಪ್ರೀಂಕೋರ್ಟ್‌ ವಿಪ್‌ ಬಗ್ಗೆ ಎಲ್ಲಿಯೂ ಹೇಳಿಲ್ಲ. ಆದರೆ, ಸದನಕ್ಕೆ ಹಾಜರಾಗಿ ಎಂದು ಒತ್ತಡ ಹಾಕುವಂತಿಲ್ಲ ಎಂದು ಹೇಳಿದೆಎಂದು ಕೆಪಿಸಿಸಿ ಅಧ್ಯಕ್ಷದಿನೇಶ್ ಗುಂಡೂರಾವ್ ಅವರು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಟೀಕಿಸಿದ್ದಾರೆ.

02.00: ಜಾರ್ಜ್‌ ನಿವಾಸದಲ್ಲಿ ಕಾಂಗ್ರೆಸ್‌ ನಾಯಕರೊಂದಿಗೆ ಎಚ್‌ಡಿಕೆ ಕುಮಾರಸ್ವಾಮಿ ಚರ್ಚೆ

ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ಜತೆ ಸಮಾಲೋಚನೆ ನಡೆಸಿದ ಸಿಎಂ ಎಚ್‌.ಡಿ ಕುಮಾರಸ್ವಾಮಿ, ನಂತರ ದೊಮ್ಮಲೂರಿನ ಬಳಿ ಇರುವ ಜಾರ್ಜ್‌ ನಿವಾಸಕ್ಕೆ ತೆರಳಿದರು.ಅಲ್ಲಿ ಕಾಂಗ್ರೆಸ್‌ ನಾಯಕರೊಂದಿಗೆ ಸಭೆ ನಡೆಸುತ್ತಿದ್ದಾರೆ.

12.45: ಜನ ವಿರೋಧಿ ಸರ್ಕಾರ ಬೇಗ ಹೋಗಬೇಕೆಂಬ ಆಶಯ ಈಡೇರಿದೆ:ಕೆ.ಎಸ್.ಈಶ್ವರಪ್ಪ

ಸುಪ್ರೀಂ ಕೋರ್ಟ್ ತೀರ್ಪು ಇಡೀ ರಾಜ್ಯದ ಜನರಲ್ಲಿ ಸಂತಸ ತಂದಿದೆ. ಜನವಿರೋಧಿ ಸರ್ಕಾರ ಆದಷ್ಟು ಬೇಗ ಹೋಗಬೇಕು ಎಂಬುದು ಜನರ ಆಶಯವಾಗಿತ್ತು.

12.27: ನಾವೆಲ್ಲ ಒಟ್ಟಿಗಿದ್ದೇವೆ, ವಿಶ್ವಾಸಮತದಲ್ಲಿ ಭಾಗವಹಿಸುವುದಿಲ್ಲ

ಸುಪ್ರೀಂ ಕೋರ್ಟ್‌ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ನಾವೆಲ್ಲ ಒಟ್ಟಿಗಿದ್ದೇವೆ. ನಮ್ಮ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಹಿಂದಿರುಗಿ ಹೋಗಿ ಸದನದಲ್ಲಿ ಭಾಗವಹಿಸುವ ಪ್ರಶ್ನೆಯೇ ಇಲ್ಲ. ವಿಶ್ವಾಸಮತ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ.

12.10:‘ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್‌ ನಿರ್ಧರಿಸಬೇಕು’ ಎಂದು ಸುಪ್ರೀಂಕೋರ್ಟ್‌ ಬುಧವಾರ ಮಹತ್ವದ ತೀರ್ಪು ನೀಡಿದೆ. ಸುಪ್ರೀಂಕೋರ್ಟ್ ಆದೇಶದ ಪ್ರತಿ ಇಲ್ಲಿದೆ.

12.00:ದೇವೇಗೌಡರ ಮನೆಯಲ್ಲಿ ಕುಮಾರಸ್ವಾಮಿ ಸಮಾಲೋಚನೆ. ಗುರುವಾರದ ವಿಶ್ವಾಸ ಮತ ಯಾಚನೆ ಕುರಿತಂತೆ ದೇವೇಗೌಡರಿಂದ ಸಲಹೆ ಕೇಳುತ್ತಿರುವ ಸಾಧ್ಯತೆ.

11.44: ವಿಳಂಬವಿಲ್ಲದೇ ನಿರ್ಧಾರ ತೆಗೆದುಕೊಳ್ಳಬೇಕು: ಮಾಜಿ ಸ್ಪೀಕರ್‌ ಬೋಪಯ್ಯ

ರಾಜ್ಯ ರಾಜಕೀಯ ಗೊಂದಲಗಳಿಗೆ ಸುಪ್ರೀಂ ಕೋರ್ಟ್ ಸ್ಪಷ್ಟ ವಾಗಿ ಪರಿಹಾರ ಹೇಳಿದೆ. ಇದು ಸ್ವಾಗತಾರ್ಹ. ನಾಳೆ ನಿಗದಿ ಆಗಿರುವಂತೆ ವಿಶ್ವಾಸ ಮತ ದ ಮೇಲೆ ಸದನದಲ್ಲಿ ಚರ್ಚೆ ನಡಿಯಬೇಕು. ಶಾಸಕರು ನೀಡಿದ ರಾಜೀನಾಮೆ ಕುರಿತು ವಿಳಂಬ ಮಾಡದೇ ಸ್ಪೀಕರ್ ನಿರ್ಧಾರ ತೆಗೆಕೊಳ್ಳಬೇಕು.

11.15: ಶಾಸಕ ಮಿತ್ರರೇ ಅನರ್ಹತೆಗೆ ಒಳಗಾಗಬೇಡಿ, ಮರಳಿ ಬನ್ನಿ:ಡಿಕೆಶಿ

ಸುಪ್ರೀಂಕೋರ್ಟ್‌ಗೆ ತೀರ್ಪು ಸ್ವಾಗತಾರ್ಹ. ತೀರ ಸರಳವಾಗಿ ಕೋರ್ಟ್‌ ತೀರ್ಪು ನೀಡಿದೆ. ನಾಳೆ ಸದನಕ್ಕೆ ಅವರು ಬರಲು ಬಾರದೇ ಇರಲು ಅವರು ಸ್ವತಂತ್ರರರು. ಆದರೆ, ವಿಪ್‌ ಅನ್ನು ಒಂದು ಪಕ್ಷದಿಂದ ಆಯ್ಕೆಯಾದ ಯಾರೂ ಉಲ್ಲಂಘಿಸಲು ಸಾಧ್ಯವಿಲ್ಲ.ನನ್ನ ಶಾಸಕ ಮಿತ್ರರು ಮರಳಿ ಬರಬೇಕು. ಅನರ್ಹ ಆಗುವಂಥ ಸನ್ನಿವೇಶ ಸೃಷ್ಟಿಸಿಕೊಳ್ಳಬೇಡಿ.

11.15: ಸರ್ಕಾರ ಬೀಳುವುದು ಖಚಿತ

ಇದು ಪ್ರಜಾಪ್ರಭುತ್ವದ ಗೆಲುವು. ಸ್ಪೀಕರ್ ರಾಜೀನಾಮೆ ಬಗ್ಗೆ ಬೇಗ ತೀರ್ಮಾನ ತಗೊಂಡು ಸುಪ್ರೀಂಕೋರ್ಟ್‌ಗೆ ತನ್ನ ತೀರ್ಪು ತಿಳಿಸಬೇಕು ಅಂತ ಹೇಳಿದೆ. ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಶಾಸಕರ ಮೇಲೆ ಒತ್ತಡ ಹೇರುವಂತಿಲ್ಲ. ಕುಮಾರಸ್ವಾಮಿ ನಾಳೆ ವಿಶ್ವಾಸಮತ ಪ್ರಸ್ತಾವ ಮಂಡಿಸುತ್ತಾರಂತೆ. ಅವರು ಈಗ ಸದನದ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಸರ್ಕಾರ ಬಿದ್ದು ಹೋಗುವುದು ಖಚಿತ. –ಯಡಿಯೂರಪ್ಪ

11.06: ನಾಳೆ ಸದನಕ್ಕೆ 15 ಶಾಸಕರು ಹಾಜರಾಗಬಹುದು ಆಗದೆಯೂ ಇರಬಹುದು: ಮುಕುಲ್‌ ರೋಹಟಗಿ

ನಾಳಿನ ವಿಶ್ವಾಸಮತವನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್‌ ತನ್ನ ಆದೇಶದಲ್ಲಿ ಎರಡು ಮುಖ್ಯ ವಿಚಾರಗಳನ್ನು ಪ್ರಸ್ತಾಪಿಸಿದೆ. ರಾಜೀನಾಮೆ ನೀಡಿರುವ 15 ಶಾಸಕರು ನಾಳೆ ಸದನಕ್ಕೆ ಬರಬೇಕು ಎಂದು ಒತ್ತಾಯ ಮಾಡುವಂತಿಲ್ಲ. 15 ಶಾಸಕರು ಸದನಕ್ಕೆ ಹೋಗಬಹುದು ಹೋಗದೆಯೂ ಇರಬಹುದು.

11.06:ನ್ಯಾಯಾಲಯದ ಆಶಯದಂತೇ ನಡೆದುಕೊಳ್ಳುತ್ತೇನೆ: ಸ್ಪೀಕರ್‌

‘ಸುಪ್ರೀಂಕೋರ್ಟ್‌ ಆದೇಶವನ್ನು ಪಾಲಿಸುತ್ತೇನೆ. ಕೋರ್ಟ್‌ ಆಶಯಕ್ಕೆ ಭಂಗಬರದಂತೆ ನಾನು ತೀರ್ಮಾನ ತೆಗೆದುಕೊಳ್ತೀನಿ. ನಾನು ನ್ಯಾಯಾಲಯಕ್ಕೆ ತಲೆಬಾಗಿ ಕೆಲಸ ಮಾಡ್ತೀನಿ. ಅನಿರ್ದಿಷ್ಟ ಅವಧಿಗೆ ನನ್ನ ನಿರ್ಧಾರವನ್ನು ಮುಂದಕ್ಕೆ ಹಾಕುವುದಿಲ್ಲ. ನೀನು ಕೂಡ ನಿನ್ನ ಕೆಲಸ ಸರಿಯಾಗಿ ಮಾಡಬೇಕು ಅಂತ ಮಾರ್ಮಿಕವಾಗಿ ಹೇಳಿದ್ದಾರೆ. ಅದನ್ನು ನಾನು ಗೌರವಿಸುತ್ತೇನೆ. ಅವರ ಆಶಯದಂತೆ ನಡೆದುಕೊಳ್ಳುತ್ತೇನೆ’ ಸ್ಪೀಕರ್ ರಮೇಶ್‌ ಕುಮಾರ್ ಪ್ರತಿಕ್ರಿಯೆ.

10.36:ಸುಪ್ರೀಂ ಕೋರ್ಟ್‌ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರ ನೇತೃತ್ವದ ಪೀಠದಿಂದ ತೀರ್ಪು ಪ್ರಕಟ

–ಸುಪ್ರೀಂಕೋರ್ಟ್‌ ತೀರ್ಪಿನ ಮೊದಲ ಅಂಶ ‘ಸಂವಿಧಾನವನ್ನು ಕಾಪಾಡಬೇಕು’.

–15 ಶಾಸಕರರಾಜೀನಾಮೆ ಬಗ್ಗೆ ನಿರ್ಧರಿಸುವಂತೆ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್‌ ಆದೇಶ

–ರಾಜೀನಾಮೆ ಬಗ್ಗೆ ನಿರ್ಧರಿಸುವಂತೆ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್‌ ಆದೇಶ

–ಕಲಾಪದಲ್ಲಿ ಭಾಗವಹಿಸುವುದು ಶಾಸಕರ ವಿವೇಚನೆಗೆ ಬಿಟ್ಟಿದ್ದು. ರಾಜೀನಾಮೆ ಪ್ರಕರಣವನ್ನು 190ರ ಅಡಿಯಲ್ಲಿ ಇತ್ಯರ್ಥ ಮಾಡಿ. ಅಧಿವೇಶನದಲ್ಲಿ ಭಾಗವಹಿಸುವಂತೆ ಒತ್ತಾಯ ಮಾಡಬಾರದು

–ಇದು ಮಧ್ಯಂತರ ಆದೇಶ ಮಾತ್ರ; ಪೂರ್ಣ ಆದೇಶ ಬಾಕಿ ಇದೆ.

–ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಧ್ಯಸ್ಥಿಕೆ ವಹಿಸುವುದಿಲ್ಲ

–ರಾಜೀನಾಮೆ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಸ್ಪೀಕರ್ ವಿವೇಚನೆಗೆ ಬಿಟ್ಟಿದ್ದು

–ನಾಳಿನ ವಿಶ್ವಾಸಮತಕ್ಕೆ ಶಾಸಕರು ಭಾಗವಹಿಸಬೇಕಿಲ್ಲ. ರಾಜೀನಾಮೆ ನೀಡಿರುವ ಶಾಸಕರಿಗೆ ವಿಪ್‌ ಅನ್ವಯವಾಗದು.

–ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಗಳ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ವಿಸ್ತೃತ ಪರಮಾರ್ಶೆಯ ಅಗತ್ಯವಿದೆ. ಅದರ ನಂತರ ಅಂತಿಮ ತೀರ್ಪು ಪ್ರಕಟವಾಗಲಿದೆ.

10.35: ಶಾಸಕರ ರಾಜೀನಾಮೆ ಕುರಿತ ತೀರ್ಪನ್ನು ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ರಕಟಿಸಲಿದೆ ಸುಪ್ರೀಂ ಕೋರ್ಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT