ಹಿರಿಯ ಗಾಯಕಿ ಟಿ.ಶಾರದಾ ನಿಧನ

ಶನಿವಾರ, ಮಾರ್ಚ್ 23, 2019
34 °C

ಹಿರಿಯ ಗಾಯಕಿ ಟಿ.ಶಾರದಾ ನಿಧನ

Published:
Updated:
Prajavani

ಬೆಂಗಳೂರು: ಹಿರಿಯ ಗಾಯಕಿ ಟಿ.ಶಾರದಾ (80) ಅವರು ಅನಾರೋಗ್ಯದಿಂದಾಗಿ ಗುರುವಾರ ನಿಧನರಾದರು.

ಶಾರದಾ ಅವರ ಪತಿ ಈ ಹಿಂದೆಯೇ ತೀರಿಕೊಂಡಿದ್ದಾರೆ. ಅವರಿಗೆ ತಲಾ ನಾಲ್ವರು ಸಹೋದರ, ಸಹೋದರಿಯರು ಇದ್ದಾರೆ. ಮಹಾರಾಣಿ ಕಾಲೇಜಿನಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಅವರು, ‘ಕರ್ನಾಟಕ ಸಂಗೀತ ದರ್ಪಣ’ ಕೃತಿ ರಚಿಸಿದ್ದಾರೆ.

ಈ ತನಕ ಐದು ಸಂಪುಟಗಳು ಪ್ರಕಟಗೊಂಡಿದ್ದು, ಆರನೇ ಸಂಪುಟವನ್ನು ಹೊರತರುವ ತಯಾರಿ ನಡೆಸಿದ್ದರು.  ಕರ್ನಾಟಕ ಸಂಗೀತ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಬನಶಂಕರಿಯ ಸ್ಮಶಾನದಲ್ಲಿ ಶುಕ್ರವಾರ ಅಂತ್ಯಕ್ರಿಯೆ ನೆರವೇರಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !