ಶ್ರೀನಿವಾಸ್ ಸದಸ್ಯತ್ವ ರದ್ದುಪಡಿಸಲು ಆಗ್ರಹ

ಬುಧವಾರ, ಏಪ್ರಿಲ್ 24, 2019
32 °C

ಶ್ರೀನಿವಾಸ್ ಸದಸ್ಯತ್ವ ರದ್ದುಪಡಿಸಲು ಆಗ್ರಹ

Published:
Updated:

ಬೆಂಗಳೂರು: ‘ರಣಂ’ ಚಿತ್ರದ ನಿರ್ಮಾಪಕ ಆರ್. ಶ್ರೀನಿವಾಸ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೊಂದಿರುವ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಸಮೀನಾ ಬಾನು ಅವರ ಪತಿ ತಬ್ರೇಜ್ ಮಂಡಳಿಯ ಪದಾಧಿಕಾರಿಗಳಲ್ಲಿ ಮನವಿ ಮಾಡಿದರು.

ಚಿತ್ರೀಕರಣದ ಸಂದರ್ಭದಲ್ಲಿ ನಡೆದ ದುರ್ಘಟನೆಯಲ್ಲಿ ಸಮೀನಾ ಮತ್ತು ಅವರ ಪುತ್ರಿ ಆಯೀಷಾ ಮೃತಪಟ್ಟಿದ್ದಾರೆ.

ಸೋಮವಾರ ಮಂಡಳಿಗೆ ಬಂದ ತಬ್ರೇಜ್ ಅವರು ಅಲ್ಲಿನ ಪದಾಧಿಕಾರಿಗಳಲ್ಲಿ ತಮ್ಮ ನೋವು ತೋಡಿಕೊಂಡರು. 2016ರಲ್ಲಿ ‘ಮಾಸ್ತಿ ಗುಡಿ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಮೃತಪಟ್ಟ ಉದಯ್ ಮತ್ತು ಅನಿಲ್ ಅವರ ಕುಟುಂಬಗಳಿಗೆ ಪರಿಹಾರ ನೀಡಿದ ಮಾದರಿಯಲ್ಲೇ ತಮಗೂ ಪರಿಹಾರ ನೀಡಬೇಕು ಎಂಬ ಬೇಡಿಕೆಯನ್ನು ತಬ್ರೇಜ್ ಅವರು ಮುಂದಿಟ್ಟಿದ್ದಾರೆ ಎಂದು ಮಂಡಳಿಯ ಕಾರ್ಯದರ್ಶಿ ಭಾ.ಮ. ಹರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚುನಾವಣೆ ಮುಗಿದ ನಂತರ ಈ ಕುರಿತು ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸಿ, ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರಿಗೆ ಭರವಸೆ ನೀಡಲಾಗಿದೆ’ ಎಂದು ಹರೀಶ್ ಹೇಳಿದರು. ದುರ್ಘಟನೆಗೆ ಸಂಬಂಧಿಸಿದಂತೆ ಶ್ರೀನಿವಾಸ್ ಅವರಿಂದಲೂ ಮಂಡಳಿ ಹೇಳಿಕೆ ಪಡೆಯಲಿದೆ ಎಂದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !