ಬುಧವಾರ, ಜನವರಿ 22, 2020
22 °C
ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ: ಪರ–ವಿರೋಧದ ರ್‍ಯಾಲಿ

ಪೌರತ್ವ ಕಾಯ್ದೆ ವಾಪಸ್ ಪಡೆಯಲಿ: ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ತಮಿಳುನಾಡಿನಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ, ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೊ, ಟಿಎನ್‌ಸಿಸಿ ಅಧ್ಯಕ್ಷ ಕೆ.ಎಸ್. ಅಳಗಿರಿ ಮತ್ತು ವಿಸಿಕೆ ಮುಖ್ಯಸ್ಥ ತಿರುಮಾವಲವನ್ ಹಾಗೂ ಸಾವಿರಾರು ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡಿದ್ದರು. ‘ಪೌರತ್ವ ಕಾಯ್ದೆ ಜಾರಿಗೊಳಿಸುವ ಮೂಲಕ ಬಿಜೆಪಿ ಹಾಗೂ ಎಐಎಡಿಎಂಕೆ ಪಕ್ಷಗಳು ಮುಸ್ಲಿಮರು ಹಾಗೂ ಶ್ರೀಲಂಕಾ ತಮಿಳರಿಗೆ ದ್ರೋಹ ಬಗೆದಿವೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಮೋದಿಗೆ ಧಿಕ್ಕಾರ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಯತ್ನಿಸಬೇಡಿ. ಕೇಸರಿ ಧ್ವಜವನ್ನು ಬಳಸಿ ಬಹುತ್ವ ಭಾರತವನ್ನು ಮೂಲೆಗೆ ಸರಿಸಲು ಯತ್ನಿಸದಿರಿ. ಕಾಯ್ದೆಯನ್ನು ವಾಪಸ್ ಪಡೆಯಿರಿ’ ಎಂಬಿತ್ಯಾದಿ ಘೋಷಣೆಗಳು ಕೇಳಿಬಂದವು. ರ‍್ಯಾಲಿಗೆ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಿ, ಡ್ರೋನ್‌ಗಳನ್ನು ಬಳಸಿ ವಿಡಿಯೊ ಚಿತ್ರೀಕರಣ ಮಾಡುವಂತೆ ಮಾಡುವಂತೆ ಹೈಕೋರ್ಟ್ ಸರ್ಕಾರಕ್ಕೆ
ಸೂಚಿಸಿತ್ತು. ಐದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಯೂತ್ ಲೀಗ್‌ ಪ್ರತಿಭಟನೆ: ಕೇರಳದಲ್ಲಿ ಪ್ರತಿಭಟನೆಯ ಕಾವು ಮುಂದುವರಿದಿದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ (ಐಯುಎಂಎಲ್) ಯುವ ಘಟಕ ಯೂತ್ ಲೀಗ್ ಸದಸ್ಯರು ಕೇರಳದಾದ್ಯಂತ ಅಂಚೆ ಕಚೇರಿಗಳ ಎದುರು  ಪ್ರತಿಭಟನೆ ನಡೆಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು