ಗುರುವಾರ , ನವೆಂಬರ್ 21, 2019
26 °C

ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ

Published:
Updated:

ತಲಕಾವೇರಿ: ಜೀವನದಿ ಕಾವೇರಿಯ ಉಗಮ ಸ್ಥಳವು ವಾರ್ಷಿಕ ತೀರ್ಥೋದ್ಭವಕ್ಕೆ ಸಜ್ಜಾಗಿದೆ.

ಇಂದು ತಡರಾತ್ರಿ 12.59ಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಕಾವೇರಿಯು ಭಕ್ತರಿಗೆ ತೀರ್ಥ ರೂಪಿಣಿಯಾಗಿ ಕಾಣಿಸಿಕೊಳ್ಳುವಳು. ರಾತ್ರಿ ಹತ್ತರಿಂದ ಕ್ಷೇತ್ರದಲ್ಲಿ ಮಂತ್ರ ಘೋಷಗಳು ಆರಂಭವಾಗಲಿವೆ. ಕ್ಷೇತ್ರದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ಯ ನೇತೃತ್ವದಲ್ಲಿ ‌ಪೂಜೆಗಳು ನಡೆಯಲಿವೆ.

ಕಾವೇರಿ ಮಾತೆಯು ಚಿನ್ನಾಭರಣ ತೊಟ್ಟು ಕಂಗೊಳಿಸುತ್ತಿದ್ದಾಳೆ.  ಭಾಗಮಂಡಲದಲ್ಲಿ ಪಿಂಡ‌ ಪ್ರದಾನ ಮಾಡಿದ ಭಕ್ತರು ತಲಕಾವೇರಿ ಕ್ಷೇತ್ರದತ್ತ ಬರಲು ಆರಂಭಿಸಿದ್ದಾರೆ. ಸಂಜೆಯಿಂದಲೂ ಮಳೆಯಾಗುತ್ತಿದ್ದು ಸಂಭ್ರಮಕ್ಕೆ ಅಡ್ಡಿಯಾಗಿದೆ.

ಪ್ರತಿಕ್ರಿಯಿಸಿ (+)