ಶುಕ್ರವಾರ, ಡಿಸೆಂಬರ್ 6, 2019
21 °C

ಹೇಳಿಕೆಗೆ ಕ್ಷಮೆ ಕೋರಿದ ತಮ್ಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್‌.ಪೇಟೆ:  ‘ಅನರ್ಹ ಶಾಸಕ ಕೆ.ಸಿ. ನಾರಾಯಣಗೌಡ ಗೆದ್ದರೆ ಕೆ.ಆರ್‌.ಪೇಟೆಯನ್ನು ಕಾಮಾಟಿಪುರ ಮಾಡುತ್ತಾರೆ’ ಎಂಬ ತಮ್ಮ ಹೇಳಿಕೆಗೆ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಕ್ಷಮೆ ಯಾಚಿಸಿದ್ದಾರೆ.

ಅವರ ಹೇಳಿಕೆಗೆ ಮುಂಬೈನಲ್ಲಿ ನೆಲೆಸಿರುವ ಕೆ.ಆರ್‌.ಪೇಟೆ ಜನರು ವ್ಯಾಪಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಯಾಗುತ್ತಿತ್ತು. ಪರಿಸ್ಥಿತಿಯನ್ನು ಅರಿತ ತಮ್ಮಣ್ಣ ಕ್ಷಮೆ ಕೇಳಿದ್ದಾರೆ.

‘ನಾನು ನಾಲ್ಕು ಬಾರಿ ಮುಂಬೈಗೆ ಹೋಗಿದ್ದೇನೆ. ಕಾಮಾಟಿಪುರ ಕುರಿತು ನನಗೇನೂ ಗೊತ್ತಿಲ್ಲ. ಆದರೆ, ಅದರ ಬಗ್ಗೆ ಕೇಳಿದ್ದೆ ಅಷ್ಟೇ. ಮಾತಿಗಾಗಿ ಕಾಮಾಟಿಪುರ ಹೇಳಿಕೆ ನೀಡಿದ್ದೆ. ನನ್ನ ಮಾತಿನಿಂದ ಕ್ಷೇತ್ರದ ಜನರಿಗೆ, ಅಕ್ಕ–ತಂಗಿಯರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ. ಈ ನಡುವೆ, ‘ನಾರಾಯಣಗೌಡ ಕೆ.ಆರ್‌.ಪೇಟೆಯನ್ನು ಬಾಂಬೆ ಸ್ಲಂ ಮಾಡುತ್ತಾನೆ’ ಎಂದು ಹೇಳುವ ಮೂಲಕ ತಮ್ಮಣ್ಣ ಮತ್ತೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು