ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನರ್ಹ ಶಾಸಕರಿಂದ ತೆರಿಗೆ ಹಣ ಪೋಲು’

Last Updated 18 ನವೆಂಬರ್ 2019, 12:09 IST
ಅಕ್ಷರ ಗಾತ್ರ

ಅಥಣಿ: ‘ಅನರ್ಹ ಶಾಸಕರಿಂದಾಗಿ ತೆರಿಗೆ ಹಣ ಪೋಲಾಗುತ್ತಿದೆ’ ಎಂದು ಶಾಸಕ, ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ ದೂರಿದರು.

ಇಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಈ ಚುನಾವಣೆ ಅಗತ್ಯವಿರಲಿಲ್ಲ. ಜನರು ಹಾಗೂ ತೆರಿಗೆದಾರರ ಮೇಲೆ ಅನರ್ಹ ಶಾಸಕರು ಹೇರಿದಂತಹ ಚುನಾವಣೆ ಇದು. ಪ್ರಜಾಪ್ರಭುತ್ವಕ್ಕೆ ಮಾರಕವಾದುದು. ಜನರು ತೆರಿಗೆ ಕಟ್ಟಿದ ಹಣ ಅನರ್ಹ ಶಾಸಕರಿಂದಾಗಿ ವ್ಯಯವಾಗುತ್ತಿದೆ. ಇದಕ್ಕೆ ಕಾರಣರಾರು ಎನ್ನುವುದನ್ನು ಜನರು ಅರಿತುಕೊಳ್ಳಬೇಕು. ಅನರ್ಹ ಶಾಸಕರ ತೀರ್ಮಾನದ ಬಗ್ಗೆ ಜನರಲ್ಲಿ ಆಕ್ರೋಶವಿದೆ’ ಎಂದರು.

‘ಹೋದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಮಹೇಶ ಕುಮಠಳ್ಳಿ (ಅಥಣಿ) ಹಾಗೂ ಶ್ರೀಮಂತ ಪಾಟೀಲ (ಕಾಗವಾಡ) ಪ್ರಜಾಪ್ರಭುತ್ವ ವಿರೋಧಿಯಾದ ‘ಆಪರೇಷನ್‌ ಕಮಲ’ಕ್ಕೆ ಬಲಿಯಾಗಿ ಬಿಜೆಪಿ ಸೇರಿದ್ದಾರೆ. ಅವರು ನಮ್ಮ ಪ್ರಕಾರ ಅನರ್ಹ ಶಾಸಕರಷ್ಟೇ ಅಲ್ಲ ಎಲ್ಲದರಲ್ಲೂ ಅನರ್ಹರೇ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT