ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀ ಸ್ಟಾಲ್ ಗುಡದಮ್ಮ ಪುರಸಭೆಗೆ ಆಯ್ಕೆ!

Last Updated 15 ನವೆಂಬರ್ 2019, 4:53 IST
ಅಕ್ಷರ ಗಾತ್ರ

ಕಂಪ್ಲಿ: ಟೀ ಸ್ಟಾಲ್ ನಡೆಸುತ್ತಿದ್ದ ಸಾಮಾನ್ಯ ಮಹಿಳೆ ಪುರಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾರೆ.

ಸ್ಥಳೀಯ ಪುರಸಭೆ ಚುನಾವಣೆಯಲ್ಲಿ 12ನೇ ವಾರ್ಡ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗುಡದಮ್ಮ ಸ್ಪರ್ಧಿಸಿದ್ದರು. ನವೆಂಬರ್ 12ರಂದು ಮತದಾನ ನಡೆದಿದ್ದು, ಗುರುವಾರ ನಡೆದಮತ ಎಣಿಕೆಯಲ್ಲಿ 431 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಬಳಿ ಒಂದು ವರ್ಷದಿಂದ ಟೀ ಅಂಗಡಿ ನಡೆಸುತ್ತಿದ್ದು, ಪತಿ ಶ್ರೀನಿವಾಸ್ ಆಟೊಓಡಿಸುತ್ತಿದ್ದಾರೆ. ಇಬ್ಬರ ದುಡಿಮೆಯಿಂದ ಬಂದ ಆದಾಯದಲ್ಲಿ ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ.

‘ಗೆಲುವು ಸಾಧಿಸಿದ 12ನೇ ವಾರ್ಡ್‍ನಲ್ಲಿ ಬುಡಕಟ್ಟು ಸಮುದಾಯದ ಶಿಕಾರಿ ಜನಾಂಗ ವಾಸಿಸುತ್ತಿದ್ದು, ಅವರಿಗೆ ಸೂರು ಕಲ್ಪಿಸಲು ಮೊದಲ ಆದ್ಯತೆ ನೀಡುವುದಾಗಿ’ ಹೇಳಿದ ಗುಡದಮ್ಮ, ‘ರಸ್ತೆ, ನೀರು, ಚರಂಡಿ, ಬೋರ್‌ವೆಲ್ ಸೇರಿ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಕಲ್ಪಿಸುವುದಾಗಿ’ ತಿಳಿಸಿದರು.

‘ನಾನೊಬ್ಬ ಸಾಮಾನ್ಯ ಮಹಿಳೆಯಾಗಿದ್ದು, ಶಾಸಕ ಜೆ.ಎನ್. ಗಣೇಶ್ ಅವರು ಕಾಂಗ್ರೆಸ್ ಟಿಕೆಟ್ ನೀಡಿಸಿ ಗೆಲುವಿಗೆ ಕಾರಣರಾಗಿದ್ದಾರೆ. ಅವರ ನಿರೀಕ್ಷೆ ಹುಸಿಗೊಳಿಸದೆ ವಾರ್ಡ್‍ನಲ್ಲಿ ಕೆಲಸ ನಿರ್ವಹಿಸುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT